ಚೆನ್ನೈ ಸೂಪರ್ ಕಿಂಗ್ಸ್—CSK ನೂತನ ಮುಖ್ಯ ಕೋಚ್ ಆಗಿ ಭಾರತದ ಮಾಜಿ ವೇಗಿ ಜಹೀರ್ ಖಾನ್ ನೇಮಕ! - Mahanayaka
8:13 AM Tuesday 10 - November 2026

ಚೆನ್ನೈ ಸೂಪರ್ ಕಿಂಗ್ಸ್—CSK ನೂತನ ಮುಖ್ಯ ಕೋಚ್ ಆಗಿ ಭಾರತದ ಮಾಜಿ ವೇಗಿ ಜಹೀರ್ ಖಾನ್ ನೇಮಕ!

zahir khan
21/09/2026

ನವದೆಹಲಿ: ಐಪಿಎಲ್‌ ನ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ (CSK) ಮುಂಬರುವ ಸೀಸನ್‌ ಗೆ ಭಾರತದ ಮಾಜಿ ಪ್ರಮುಖ ಎಡಗೈ ವೇಗದ ಬೌಲರ್ ಜಹೀರ್ ಖಾನ್ ಅವರನ್ನು ತಮ್ಮ ನೂತನ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ. ಈ ಕುರಿತು ಸಿಎಸ್‌ ಕೆ ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಜಹೀರ್ ಖಾನ್ ಅವರನ್ನು ತಂಡಕ್ಕೆ ಸ್ವಾಗತಿಸಿದೆ.

2009 ರಿಂದ 2026 ರವರೆಗೆ ದೀರ್ಘಾವಧಿಗೆ ಸಿಎಸ್‌ ಕೆ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ನ್ಯೂಜಿಲೆಂಡ್‌ ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಅವರ ನಿರ್ಗಮನದ ನಂತರ ಜಹೀರ್ ಖಾನ್ ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಸತತ ಮೂರು ಸೀಸನ್‌ ಗಳಲ್ಲಿ ಪ್ಲೇಆಫ್ ಪ್ರವೇಶಿಸಲು ವಿಫಲವಾದ ಕಾರಣ ಸಿಎಸ್‌ ಕೆ ಮ್ಯಾನೇಜ್‌ ಮೆಂಟ್ ಫ್ಲೆಮಿಂಗ್ ಅವರೊಂದಿಗಿನ ಸುದೀರ್ಘ ಒಪ್ಪಂದವನ್ನು ಕೊನೆಗೊಳಿಸಿದೆ.

ಭಾರತದ ಪರ 92 ಟೆಸ್ಟ್, 200 ಏಕದಿನ ಹಾಗೂ 17 ಟಿ20 ಪಂದ್ಯಗಳನ್ನು ಆಡಿರುವ ಜಹೀರ್ ಖಾನ್, ಒಟ್ಟು 610 ಅಂತರರಾಷ್ಟ್ರೀಯ ವಿಕೆಟ್‌ ಗಳನ್ನು ಪಡೆದಿದ್ದಾರೆ. ಭಾರತ 2011 ರಲ್ಲಿ ಏಕದಿನ ವಿಶ್ವಕಪ್ ಜಯಿಸಿದಾಗ 21 ವಿಕೆಟ್ ಕಬಳಿಸುವ ಮೂಲಕ ಜಹೀರ್ ಭಾರತದ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದರು. ಆಟಗಾರನಾಗಿ ಐಪಿಎಲ್‌ ನಲ್ಲಿ 100 ಪಂದ್ಯಗಳನ್ನಾಡಿರುವ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪರ ಒಟ್ಟು 102 ವಿಕೆಟ್ ಪಡೆದಿದ್ದಾರೆ.

2017 ರಲ್ಲಿ ಐಪಿಎಲ್‌ ನಿಂದ ನಿವೃತ್ತರಾದ ನಂತರ ಜಹೀರ್ ಖಾನ್ ಮುಂಬೈ ಇಂಡಿಯನ್ಸ್ ತಂಡದ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕರಾಗಿ ಹಾಗೂ ಗ್ಲೋಬಲ್ ಡೆವಲಪ್‌ ಮೆಂಟ್ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ, ಲಖನೌ ಸೂಪರ್ ಜೈಂಟ್ಸ್ ತಂಡಕ್ಕೂ ಮೆಂಟರ್ ಆಗಿ ಮಾರ್ಗದರ್ಶನ ನೀಡಿದ ಅನುಭವ ಹೊಂದಿದ್ದಾರೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler