ತಂದೆ ಕೂರಿಸಿಕೊಂಡು 1200 ಕಿ.ಮೀ. ವರೆಗೆ ಸೈಕಲ್ ನಲ್ಲಿ ತೆರಳಿ ಸುದ್ದಿಯಾಗಿದ್ದ ಬಾಲಕಿಯ ತಂದೆ ಇನ್ನಿಲ್ಲ
ಬಿಹಾರ: ಕಳೆದ ವರ್ಷ ಲಾಕ್ ಡೌನ್ ಸಂಕಷ್ಟದ ಸಂದರ್ಭದಲ್ಲಿ ಜ್ಯೋತಿ ಕುಮಾರಿ ಎಂಬ 15 ವರ್ಷದ ಬಾಲಕಿ ತನ್ನ ತಂದೆಯನ್ನ ಕೂರಿಸಿಕೊಂಡು ಬರೋಬ್ಬರಿ 1200 ಕಿಲೋಮೀಟರ್ ವರೆಗೆ ಸೈಕಲ್ ಚಲಾಯಿಸಿರುವ ಸುದ್ದಿಯನ್ನು ನೀವೂ ಓದಿರಬಹುದು.
ಸತತ 7 ದಿನಗಳ ಸಮಯದಲ್ಲಿ ತನ್ನ ತಂದೆಯನ್ನ ಸೈಕಲ್ ಮೇಲೆ ಕೂರಿಸಿಕೊಂಡು ದೆಹಲಿಯ ಗುರುಗಾಂವ್ ನಿಂದ ಈಕೆ ಬಿಹಾರದ ದರ್ಬಂಗಾವರೆಗೂ ಪ್ರಯಾಣ ಬೆಳೆಸುವ ಮೂಲಕ ಭಾರೀ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದಳು. ಆದರೆ ಇದೀಗ ಈ ಪುತ್ರಿಯ ತಂದೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಗುರುಗಾಂವ್ ಗ್ರಾಮದ ಜ್ಯೋತಿ ಕುಮಾರಿ ತಂದೆ ಮೋಹನ್ ಪಾಸ್ವಾನ್ ಒಬ್ಬ ಆಟೋ ಡ್ರೈವರ್ ಆಗಿದ್ದು ಅಪಘಾತವೊಂದರ ಬಳಿಕ ಕಳೆದ ವರ್ಷ ಮಾರ್ಚ್ನಿಂದ ಅನಿವಾರ್ಯವಾಗಿ ಮನೆಯಲ್ಲೇ ಇರಬೇಕಾದ ಸ್ಥಿತಿಯಲ್ಲಿದ್ದರು.

Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by
ಕಳೆದ ವರ್ಷ ಮೊದಲ ಬಾರಿ ಲಾಕ್ಡೌನ್ ಆದೇಶ ಜಾರಿಯಾಗಿದ್ದ ವೇಳೆ ಸಾರ್ವಜನಿಕ ಸಾರಿಗೆ ಸೌಕರ್ಯವಿಲ್ಲದೇ ಅನೇಕ ಮಂದಿ ಸಂಕಷ್ಟವನ್ನ ಎದುರಿಸಿದ್ದರು. ಇದೇ ಸಾಲಿಗೆ ಸೇರಿದ್ದ ಜ್ಯೋತಿ ಬರೋಬ್ಬರಿ 1,200 ಕಿಲೋಮೀಟರ್ ಸೈಕಲ್ ಚಲಾಯಿಸಿದ್ದಳು.




























