ದೀಪಾವಳಿ ಗಿಫ್ಟ್ ನೆಪದಲ್ಲಿ ಪತ್ರಕರ್ತರಿಗೆ ಭರ್ಜರಿ ಲಂಚ!? | ಸರ್ಕಾರದ ವಿರುದ್ಧ ಗಂಭೀರ ಆರೋಪ
ದೀಪಾವಳಿ ಸಂದರ್ಭದಲ್ಲಿ ಕರ್ನಾಟಕದ ಆಯ್ದ ಪತ್ರಕರ್ತರಿಗೆ ಮುಖ್ಯಮಂತ್ರಿ ಕಚೇರಿಯಿಂದ ಗಿಫ್ಟ್ ರೂಪದಲ್ಲಿ ಲಂಚ ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.
ಸಿಹಿತಿಂಡಿಗಳು ಮತ್ತು 2.5 ಲಕ್ಷ ರೂಪಾಯಿ ನಗದು ಉಡುಗೊರೆಯಾಗಿ ನೀಡಲಾಗಿದೆ ಎಂಬ ವಿಚಾರ ಇದೀಗ ವ್ಯಾಪಕ ಚರ್ಚೆಯಾಗುತ್ತಿದ್ದು, ಆನ್ ಲೈನ್ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿವೆ.
ಸಿಹಿ ತಿಂಡಿಯೊಂದಿಗೆ ನೋಟಿನ ಕಂತೆಯನ್ನು ಕೆಲವು ಪತ್ರಕರ್ತರಿಗೆ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಟಿವಿ ಚಾನೆಲ್ ನಿರೂಪಕರಿಗೆ ಮತ್ತು ರಾಜಕೀಯ ವಿಷಯಗಳನ್ನು ಕವರ್ ಮಾಡುವವರಿಗೆ ವಿಶೇಷವಾದ ಲಂಚಗಳನ್ನು ನೀಡಲಾಗಿದೆ ಅನ್ನೋ ಆರೋಪ ಕೂಡ ಕೇಳಿ ಬಂದಿದೆ.
“ದಯವಿಟ್ಟು ಚುನಾವಣೆಯವರೆಗೂ ಮಾಧ್ಯಮಗಳಿಂದ ಸರ್ಕಾರದ ವಿರೋಧಿ ಸುದ್ದಿಗಳನ್ನು ನಿರೀಕ್ಷಿಸಬೇಡಿ” ಎಂಬ ಶೀರ್ಷಿಕೆಯ ವಾಟ್ಸಾಪ್ ಸಂದೇಶದ ಜಾಡು ಹಿಡಿದು ಹೊರಟಾಗ ಈ ಬೃಹತ್ ಭ್ರಷ್ಟಾಚಾರ ಬಯಲಿಗೆ ಬಂದಿದೆ ಎಂದು ನಾನುಗೌರಿ.ಕಾಂ ವರದಿ ಮಾಡಿದೆ.
ಸರ್ಕಾರದ ವಿರುದ್ಧ ಕೇಳಿ ಬಂದಿರುವ ಈ ಆರೋಪದ ವಿರುದ್ಧ ತನಿಖೆ ನಡೆಸಬೇಕು. ಲಂಚ ಪಡೆದುಕೊಂಡ ಪತ್ರಕರ್ತರು ಸೇರಿದಂತೆ, ಈ ರೀತಿಯ ಲಂಚವನ್ನು ನೀಡಿರುವವರ ವಿರುದ್ಧವೂ ಕ್ರಮಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka