ಫ್ಲಿಪ್ ಕಾರ್ಟ್ ನಿಂದ ಆ್ಯಸಿಡ್ ಖರೀದಿಸಿದ್ದ ಪಾಪಿಗಳು: ಪೊಲೀಸರ ಎದುರು ಬಾಯ್ಬಿಟ್ಟ ದುಷ್ಕರ್ಮಿಗಳು
ದೆಹಲಿಯಲ್ಲಿ ನಡೆದ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆ್ಯಸಿಡ್ ದಾಳಿಗೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ.
20ರ ಹರೆಯದ ಸಚಿನ್ ಅರೋರಾ ಎಂಬ ಯುವಕ ಆಯಸಿಡ್ ದಾಳಿಗೆ ಸಂಚು ರೂಪಿಸಿದ್ದು, ಇವನಿಗೆ ಹರ್ಷಿತ್ ಅಗರವಾಲ್ (19) ಮತ್ತು ವಿರೇಂದರ್ ಸಿಂಗ್ (22) ಸಹಾಯ ಮಾಡಿದ್ದರು. ನೈಋತ್ಯ ದೆಹಲಿಯ ದ್ವಾರಾಕಾದಲ್ಲಿ ಬುಧವಾರ ವಿದ್ಯಾರ್ಥಿನಿ ಶಾಲೆಗೆ ಹೋಗಲು ರಸ್ತೆ ಬದಿಯಲ್ಲಿ ನಿಂತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ಆಕೆಯ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದರು.
ಆರೋಪಿಗಳು ಫ್ಲಿಪ್ ಕಾರ್ಟ್ ಮೂಲಕ ಆ್ಯಸಿಡ್ ಖರೀದಿಸಿದ್ದರು ಎನ್ನುವುದು ಬೆಳಕಿಗೆ ಬಂದಿದೆ. ಸುಲಭವಾಗಿ ಆ್ಯಸಿಡ್ ಪೂರೈಕೆ ಮಾಡುತ್ತಿರುವ ಫ್ಲಿಫ್ ಕಾರ್ಟ್ ಗೆ ದೆಹಲಿ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ.
ದೇಶದಲ್ಲಿ ಸುಪ್ರೀಂಕೋರ್ಟ್ ಆ್ಯಸಿಡ್ ಮಾರಾಟ ನಿಷೇಧ ಮಾಡಿದ್ದರೂ ಆನ್ ಲೈನ್ ನಲ್ಲಿ ಬಹಳ ಸುಲಭವಾಗಿ ದುಷ್ಕರ್ಮಿಗಳ ಕೈಗೆ ಸಿಗುತ್ತಿದೆ ಅನ್ನೋದು ಬಯಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka