ದೀಪಾವಳಿ ಪಟಾಕಿ ಅನಾಹುತ | 10ಕ್ಕೂ ಅಧಿಕ ಮಕ್ಕಳಿಗೆ ಗಾಯ | ಕಣ್ಣು ಕಳೆದುಕೊಂಡ ಬಾಲಕ - Mahanayaka

ದೀಪಾವಳಿ ಪಟಾಕಿ ಅನಾಹುತ | 10ಕ್ಕೂ ಅಧಿಕ ಮಕ್ಕಳಿಗೆ ಗಾಯ | ಕಣ್ಣು ಕಳೆದುಕೊಂಡ ಬಾಲಕ

15/11/2020

ಬೆಂಗಳೂರು: ಪಟಾಕಿ, ಹಸಿರು ಪಟಾಕಿ ಚರ್ಚೆಗಳ ನಡುವೆಯೇ ಬೆಂಗಳೂರಿನಲ್ಲಿ ಪಟಾಕಿ ಹಚ್ಚಿ 10ಕ್ಕೂ ಅಧಿಕ ಮಕ್ಕಳು ಕಣ್ಣು ಹಾಗೂ ಮುಖಕ್ಕೆ ಗಾಯ ಮಾಡಿಕೊಂಡು ತಮ್ಮ ಭವಿಷ್ಯಕ್ಕೆ ಕೊಡಲಿಯೇಟು ನೀಡಿದ್ದಾರೆ.


Provided by

 

ಬೆಂಗಳೂರಿನಲ್ಲಿ ಪಟಾಕಿ ಹಚ್ಚಿ ಗಾಯಗೊಂಡ 10 ಮಕ್ಕಳ ಪೈಕಿ ನಾಲ್ವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. 12 ವರ್ಷದ ಸುವೇಲ್ ಎಂಬ ಬಾಲಕ ಮಿಂಟೋ ಕಣ್ಣಾಸ್ಪತ್ರೆಗೆ ದಾಖಲಾಗಿದ್ದು, ಈತನ ಎರಡೂ ಕಣ್ಣುಗಳಿಗೂ ತೀವ್ರ ಹಾನಿಯಾಗಿದೆ.

 

ಸುವೇಲ್ ನಿನ್ನೆ ರಾತ್ರಿ ಪಟಾಕಿ ಹೂವಿನ ಕುಂಡ ಹಚ್ಚುವಾಗ ಹಚ್ಚುವಾಗಿ ಆತನ ಕಣ್ಣಿಗೆ ಬೆಂಕಿ ಹತ್ತಿಕೊಂಡಿದ್ದು, ಎರಡೂ ಕಣ್ಣುಗಳೂ ತೀವ್ರವಾಗಿ ಹಾನಿಗೊಂಡಿದ್ದು, ದೃಷ್ಟಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾನೆ.

 

ದೀಪಾವಳಿಗೆ ಪಟಾಕಿ ಹಚ್ಚಿ ಎಂದು ಬೆಂಬಲಿಸುವವರು ಯಾರೂ ಕೂಡ ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸುವುದಿಲ್ಲ. ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಯಾರು ಕೂಡ ಅನಾಹುತಕಾರಿ ಪಟಾಕಿಗಳನ್ನು ಹಚ್ಚಬೇಡಿ. ಹಬ್ಬದ ಖುಷಿಗಾಗಿ ಇಡೀ ಜೀವಮಾನ ನಿಮ್ಮ ಮಕ್ಕಳು ಕಣ್ಣಿಲ್ಲದೇ, ಸುಟ್ಟ ಮುಖ ಹೊತ್ತು ತಿರುಗಾಡುವ ಸನ್ನಿವೇಶ ಸೃಷ್ಟಿಸದಿರಿ ಎನ್ನುವ ಮಾತುಗಳು ಸದ್ಯ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ