ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ಆಚರಿಸುವ ಹಬ್ಬ ದೀಪಾವಳಿ | ಪಿಎಸ್ ಐ ಮೇಟಿ - Mahanayaka

ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ಆಚರಿಸುವ ಹಬ್ಬ ದೀಪಾವಳಿ | ಪಿಎಸ್ ಐ ಮೇಟಿ

15/11/2020

ಚನ್ನಗಿರಿ: ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಎಲ್ಲಾ ಪೊಲೀಸ್ ಸಿಬ್ಬಂದಿ ವರ್ಗದವರೊಂದಿಗೆ ಬಾರಿ ಪೋಲಿಸ್ ಠಾಣೆಯಲ್ಲಿ  ಬೆಳಕಿನ ಹಬ್ಬ ದೀಪಾವಳಿ ಹಬ್ಬವನ್ನು  ಠಾಣೆಯ ಪಿಎಸ್ ಐ ಶಿವರುದ್ರಪ್ಪ ಎಸ್. ಮೇಟಿ ರವರು ಎಲ್ಲಾ ಪೊಲೀಸ್ ಸಿಬ್ಬಂದಿಗಳಿಗೆ   ಸಿಹಿಯನ್ನು ಹಂಚಿ ದೀಪಾವಳಿ ಆಚರಿಸಲಾಯಿತು.

 

ಹಬ್ಬವು  ಕತ್ತಲಿನ ಮೇಲೆ ಬೆಳಕಿನ ವಿಜಯವನ್ನು ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ಆಚರಿಸುವ ದೀಪಾವಳಿ ಹಬ್ಬವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಕಳೆದ ವರ್ಷ ಎಲ್ಲಾ ಯುವಕರು ಪಟಾಕಿಯನ್ನು ಸಿಡಿಸಿ ಸಂಭ್ರಮದಿಂದ ಆಚರಿಸುತಿದ್ದರು . ಪಟಾಕಿಯಿಂದಾಗಿ ಸಾಕಷ್ಟು ಜನ ಯುವಕರು ತೊಂದರೆಗಳನ್ನು ಅನುಭವಿಸಿರುವುದನ್ನು ನೋಡಿದ್ದೇವೆ . ವರ್ಷ  ಕೊರೋನ ಮಹಾಮಾರಿ ರೋಗವು ದೇಶದೆಲ್ಲೆಡೆ ಆವರಿಸಿ ಮನುಕುಲವೆ ನಲುಗಿ ಹೋಗಿದೆ ಹಾಗಾಗಿ ಭಾರಿ ಪಟಾಕಿಯ ಹೊಗೆಯಿಂದಲೂ ಕೂಡ ನಾನ ರೀತಿಯ ರೋಗವು ಬರಬಹುದಾಗಿದೆ  ಎಂದು  ರಾಜ್ಯ ಸರ್ಕಾರ ಪಟಾಕಿಯನ್ನು ನಿಷೇದಿಸಲಾಗಿದೆ . ಹಸಿರು ಪಟಾಕಿಯನ್ನು ಹಾರಿಸುವ ಮೂಲಕ  ಮಕ್ಕಳು ಯುವಕರು ದೀಪಾವಳಿ ಹಬ್ಬವನ್ನು ಆಚರಿಬೇಕು ಎಂದರು ಎಂದು ಅವರು ತಿಳಿಸಿದರು.

ಇತ್ತೀಚಿನ ಸುದ್ದಿ