ರನ್ಯಾ ರಾವ್ ಗೆ 25 ಲಕ್ಷ ಗಿಫ್ಟ್ ಕೊಟ್ರಾ ಡಾ.ಜಿ.ಪರಮೇಶ್ವರ್?: ಮುಜುಗರ ತಂದಿಟ್ಟ ಡಿಕೆಶಿ ಹೇಳಿಕೆಗೆ ಪರಂ, ಗರಂ - Mahanayaka

ರನ್ಯಾ ರಾವ್ ಗೆ 25 ಲಕ್ಷ ಗಿಫ್ಟ್ ಕೊಟ್ರಾ ಡಾ.ಜಿ.ಪರಮೇಶ್ವರ್?: ಮುಜುಗರ ತಂದಿಟ್ಟ ಡಿಕೆಶಿ ಹೇಳಿಕೆಗೆ ಪರಂ, ಗರಂ

parameshwar vs dk shivakumar
23/05/2025

ಬೆಂಗಳೂರು: ಅಕ್ರಮ ಚಿನ್ನ ಸಾಗಾಟ ಪ್ರಕರಣದ ಆರೋಪಿಯಾಗಿರುವ ರನ್ಯಾ ರಾವ್ ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ 25 ಲಕ್ಷ ರೂ. ಉಡುಗೊರೆ ನೀಡಿದ್ದಾರೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯಿಂದ ಪರಮೇಶ್ವರ್ ಗೆ ತೀವ್ರ ಮುಜುಗರ ಉಂಟಾಗಿದೆ.

ಜಾರಿ ನಿರ್ದೇಶನಾಲಯದಿಂದ ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿರುವ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆದಿತ್ತು. ಎರಡು ದಿನಗಳ ಕಾಲ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಇ.ಡಿ ದಾಳಿಗೆ ನಿಖರವಾದ ಕಾರಣಗಳು ತಿಳಿದಿಲ್ಲವಾದರೂ ರನ್ಯಾ ರಾವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎನ್ನುವ ಶಂಕೆ ಮೂಡಿದೆ.

ಈ ನಡುವೆ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಡಿ.ಕೆ.ಶಿವಕುಮಾರ್, ರನ್ಯಾ ರಾವ್ ಅವರ ಮದುವೆಯ ಉಡುಗೊರೆಯಾಗಿ ಡಾ.ಜಿ.ಪರಮೇಶ್ವರ್ ಅವರು ₹25 ಲಕ್ಷವನ್ನು ಕೊಟ್ಟಿರಬಹುದು. ರನ್ಯಾ ರಾವ್ ಗೆ ಹಣ ನೀಡಿದ ಮಾತ್ರಕ್ಕೆ ಚಿನ್ನ ಕಳ್ಳಸಾಗಣೆ ಮಾಡಲು ಹೇಳುತ್ತಾರೆಯೇ? ಈ ರೀತಿ ಯಾವ ರಾಜಕಾರಣಿಯೂ ಹೇಳಲು ಸಾಧ್ಯವಿಲ್ಲ ಅಂತ ಹೇಳಿದ್ದರು.

ಆದ್ರೆ ಈ ಹೇಳಿಕೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ಇಡಿ ದಾಳಿಗೆ ಸ್ಪಷ್ಟ ಕಾರಣ ಬಹಿರಂಗವಾಗದೇ ಇರುವ ಸಂದರ್ಭದಲ್ಲಿ ಕೂಡ ಡಿ.ಕೆ.ಶಿವಕುಮಾರ್ ರನ್ಯಾ ರಾವ್ ಪ್ರಕರಣದಲ್ಲಿ ಪರಮೇಶ್ವರ್ ಹಣ ನೀಡಿರುವ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಇದು ಪರಮೇಶ್ವರ್ ಗೆ ಮುಜುಗರ ತಂದಿಟ್ಟಿದೆ.

ಇನ್ನೂ ಮಾಧ್ಯಮಗಳ ಜೊತೆಗೆ ಪರಮೇಶ್ವರ್ ಅವರು ಮಾತನಾಡುತ್ತಿದ್ದ ವೇಳೆ, ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದಾಗ, ಈ ವಿಷಯ ಅವರನ್ನೇ ಕೇಳಿ ಎಂದು ಪರಮೇಶ್ವರ್ ಡಿ.ಕೆ.ಶಿವಕುಮಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.  ರನ್ಯಾ ರಾವ್ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ದಾಳಿ ನಡೆಸಿದೆ ಎಂದು ಯಾರು ಹೇಳಿದ್ದು ಎಂದು ಪರಮೇಶ್ವರ್ ಮರು ಪ್ರಶ್ನೆ ಹಾಕಿದ್ದಾರೆ. ಅಲ್ಲದೇ  ಯಾರೋ ಹೇಳಿದ ತಕ್ಷಣ ಇದಕ್ಕೆಲ್ಲಾ ಉತ್ತರ ನೀಡಲು ಸಾಧ್ಯವಿಲ್ಲ. ಮೊದಲು ತನಿಖೆ ಆಗಲಿ. ವರದಿ ಬರಲಿ. ನಂತರದಲ್ಲಿ ನೋಡೋಣ ಎಂದು ಡಿಕೆಶಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

<

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ