ನಾಳೆ ಅವಳ ಬರ್ತ್ ಡೇ ಇತ್ತು ಸರ್…! | ಅಗ್ನಿ ಅವಘಡದಲ್ಲಿ ಮಗಳನ್ನು ಕಳೆದುಕೊಂಡ ತಂದೆ ಕಣ್ಣೀರು
ಬೆಂಗಳೂರು: ರಾಜಾಜಿನಗರದಲ್ಲಿರುವ ಇಲೆಕ್ಟ್ರಾನಿಕ್ ಬೈಕ್ ಶೋರೂಂನಲ್ಲಿ ಬೆಂಕಿ ಅವಗಢದಲ್ಲಿ ಮೃತಪಟ್ಟ ಯುವತಿಯ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ.
ರಾಜಾಜಿನಗರದ ಗ್ರೀನ್ ಸಿಟಿ ಮೋಟರ್ಸ್ ಇವಿ ಶೋರೂಂ ಇಂದು ಸಂಜೆ ಸುಟ್ಟು ಕರಕಲಾಗಿದೆ. ಈ ದುರಂತದಲ್ಲಿ ಪ್ರಿಯಾ ಎಂಬ ಯುವತಿ ಸುಟ್ಟುಕರಕಲಾಗಿದ್ದಾಳೆ.
ಶೋರೂಂನಲ್ಲಿದ್ದ ಯುವರಾಜ್, ವೇದಾವತಿ ಮತ್ತು ದಿಲೀಪ್ ಎಂಬವರಿಗೂ ಗಾಯಗಳಾಗಿವೆ. ಗಾಯಾಳುಗಳಿಗೆ ರಾಜಾಜಿನಗರ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಮಗಳ ಸಾವಿನ ಸುದ್ದಿ ಕೇಳಿ, ಪ್ರಿಯಾ ಪೋಷಕರು ಘಟನಾ ಸ್ಥಳಕ್ಕೆ ಕಣ್ಣೀರು ಹಾಕುತ್ತಾ ಓಡೋಡಿ ಬಂದಿದ್ದಾರೆ.
ಪ್ರಿಯಾ ಅವರ ತಂದೆ ಆರ್ಮುಗಂ ಅವರು ರಾಜಾಜಿನಗರ ಪೊಲೀಸ್ ಠಾಣೆ ಬಳಿ ಓಡೋಡಿ ಬಂದಿದ್ದು, ಮಗಳಿಗೆ ಆಗಿರುವ ದುಸ್ಥಿತಿಯನ್ನು ನೆನೆದು ಬಿಕ್ಕಿಬಿಕ್ಕಿ ಕಣ್ಣೀರು ಹಾಕಿದ್ದಾರೆ.
ನವೆಂಬರ್ 20ರಂದು ಪ್ರಿಯಾಳ ಬರ್ತ್ ಡೇ ಇತ್ತು, ಇವತ್ತು ಮಗಳನ್ನು ಕಳೆದುಕೊಂಡಿದ್ದೇವೆ. ನಾವು ಓಕಳೀಪುರಂನಲ್ಲಿ ವಾಸ ಮಾಡುತ್ತಿದ್ದೇವೆ. ಮಗಳು ಇಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಳು. ಕಳೆದ ಮೂರು ವರ್ಷಗಳಿಂದ ಇದೇ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದಳು. ಅವಳಿಗೆ ಏನಾಯ್ತು ಗೊತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ನಾಳೆ ಪ್ರಿಯಾಳ 21ನೇ ವರ್ಷದ ಹುಟ್ಟು ಹಬ್ಬ. ಮಗಳಿಗೆ ಹುಟ್ಟು ಹಬ್ಬಕ್ಕಾಗಿ ಹೊಸ ಬಟ್ಟೆಯನ್ನೂ ಖರೀದಿ ಮಾಡಿದ್ದೆ ಎಂದು ತಂದೆ ಆರ್ಮುಗಂ ಕಣ್ಣೀರು ಹಾಕಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: