ಹೃದಯ ವಿದ್ರಾವಕ ಘಟನೆ: ಪತಿಯ ಸಾವಿನಿಂದ ನೊಂದು ತಾಯಿ –ಮಗಳು ಸಾವಿಗೆ ಶರಣು
19/11/2024
ಚಿತ್ರದುರ್ಗ: ಪತಿಯ ಸಾವಿನಿಂದ ಮನನೊಂದು ತಾಯಿ ಹಾಗೂ ಮಗಳು ಸಾವಿಗೆ ಶರಣಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಂದವಾಡಿ ಗ್ರಾಮದಲ್ಲಿ ನಡೆದಿದೆ.
ತಾಯಿ ಗೀತಾ(45), ಮಗಳು ಲಾವಣ್ಯ(17) ನೇಣುಬಿಗಿದು ಕೊಂಡು ಸಾವಿಗೆ ಶರಣಾದವರಾಗಿದ್ದಾರೆ. ವಾರದ ಹಿಂದೆಯೇ ಇವರಿಬ್ಬರು ಸಾವಿಗೆ ಶರಣಾಗಿದ್ದಾರೆ. ಆದರೆ ತಡವಾಗಿ ಬೆಳಕಿಗೆ ಬಂದಿದೆ. ತಾಯಿ ಹಾಗೂ ಮಗಳ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
6 ತಿಂಗಳ ಹಿಂದೆ ಗೀತಾ ಅವರ ಪತಿ ಬಸವರಾಜು ಹೃದಯಾಘಾತದಿಂದ ಮೃತಪಟ್ಟಿದ್ದರು. ಪತಿಯ ಸಾವಿನಿಂದ ಪತ್ನಿ ಹಾಗೂ ಪುತ್ರಿ ತೀವ್ರವಾಗಿ ನೊಂದಿದ್ದರು. ಇದೇ ಖಿನ್ನತೆಯಲ್ಲಿ ಸಾವಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಚಿಕ್ಕಜಾಜೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: