ಸೌದಿಯಲ್ಲಿ ಚಳಿ ತೀವ್ರ: ಹಿಟರ್ ನಿಂದ ಕುಟುಂಬದ ನಾಲ್ವರು ಸಾವು
ಸೌದಿಯಲ್ಲಿ ಚಳಿ ತೀವ್ರವಾಗಿದೆ. ಚಳಿಯನ್ನು ಓಡಿಸಲು ಅನುಕೂಲ ಇದ್ದವರು ಹೀಟರ್ ಬಳಸುತ್ತಾರೆ. ಹಿಟರ್ ಬಳಸುವಾಗ ಜಾಗ್ರತೆ ವಹಿಸದಿದ್ದರೆ ಮಾರಣಾಂತಿಕವಾಗಬಹುದು.
ಹೌದು. ಸೌದಿ ಅರೇಬಿಯಾದ ಪೂರ್ವ ಪ್ರಾಂತ್ಯದ ಹಫ್ರ್ ಅಲ್ ಬಾತಿನ್ ಎಂಬ ಪ್ರದೇಶದಲ್ಲಿ ಹೀಟರ್ ನಿಂದ ಉಂಟಾದ ಬೆಂಕಿಯಿಂದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಇವರು ಯಮನ್ ಮೂಲದವರು ಎಂದು ಹೇಳಲಾಗಿದೆ.
ಕುಟುಂಬದ ಹಿರಿಯ ಸಹ ಸದಸ್ಯ ಮುಹಸಿನ್ ಅಲ್ ಹಾದಿ, ಅವರ ಮಗಳು ಅಳಿಯ ಮತ್ತು ಮೊಮ್ಮಕ್ಕಳು ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ. ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನ ಚಿಕ್ಕಚಿಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಮವಾರ ಮುಂಜಾನೆ ನಾಲ್ಕು ಮೂವತ್ತರ ಹೊತ್ತಿಗೆ ಇಲ್ಲಿಯ ನಾಗರಿಕ ರಕ್ಷಣಾ ಸಿಬ್ಬಂದಿಗೆ ಬೆಂಕಿಯ ಬಗ್ಗೆ ಮಾಹಿತಿ ಸಿಕ್ಕಿತು. ರಕ್ಷಣಾ ಕಾರ್ಯಕರ್ತರು ಕೂಡಲೇ ಧಾವಿಸಿ, ಬೆಂಕಿ ನಂದಿಸುವ ಪ್ರಯತ್ನ ಮಾಡಿದರು. ಅಷ್ಟೊತ್ತಿಗಾಗಲೇ ನಾಲ್ಕು ಜನರು ಮೃತಪಟ್ಟಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj