ಏಕಕಾಲದಲ್ಲಿ ಐದು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ! - Mahanayaka

ಏಕಕಾಲದಲ್ಲಿ ಐದು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ!

kishanganj bihar
06/05/2024

ಪಾಟ್ನಾ: ಮಹಿಳೆಯೊಬ್ಬರು ಏಕಕಾಲದಲ್ಲಿ ಬರೋಬ್ಬರಿ ಐದು ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಘಟನೆಯೊಂದು  ಬಿಹಾರದ ಕಿಶನ್‌ ಗಂಜ್ ಜಿಲ್ಲೆಯಲ್ಲಿ ನಡೆದಿದ್ದು ಅಚ್ಚರಿಗೆ ಕಾರಣವಾಗಿದೆ.

20 ವರ್ಷ ವಯಸ್ಸಿನ ವಿವಾಹಿತ ಗರ್ಭಿಣಿ ಮಹಿಳೆ ಐದು ಮಕ್ಕಳಿಗೆ ಏಕಕಾಲದಲ್ಲಿ ಜನ್ಮ ನೀಡಿದ್ದು,  ಜನ್ಮ ನೀಡಿದ ಎಲ್ಲ ಐದು ಮಕ್ಕಳು ಕೂಡ ಹೆಣ್ಣು ಮಕ್ಕಳಾಗಿದ್ದಾರೆ. ಎಲ್ಲ ಮಕ್ಕಳೂ 1 ಕೆ.ಜಿ.ಗಿಂತ ಕಡಿಮೆ ತೂಕವಿದೆ. ಸದ್ಯ ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದೊಂದು ಸವಾಲಿನ ಕೆಲಸವಾಗಿತ್ತು. ಇಂತಹ ಪ್ರಕರಣಗಳು ತೀರಾ ವಿರಳವಾಗಿದೆ. ಇನ್ನೂ ಅಚ್ಚರಿಯ ವಿಚಾರ ಏನಂದರೆ, ನಾರ್ಮಲ್ ಡೆಲಿವರಿ ಮೂಲಕ ಎಲ್ಲ ಮಕ್ಕಳೂ ಜನಿಸಿದ್ದಾರೆ ಎಂದು ವೈದ್ಯೆ ಡಾ.ಫರ್ಜಾನಾ ಹೇಳಿದ್ದಾರೆ.

ಕಿಶನ್‌ಗಂಜ್ ಜಿಲ್ಲೆಯ ಪೋಥಿಯಾ ಬ್ಲಾಕ್‌ ನಲ್ಲಿ  ಇಂತಹದ್ದೊಂದು ಅಚ್ಚರಿಯ ಘಟನೆ ನಡೆದಿದೆ.  ಠಾಕೂರ್‌ಗಂಜ್ ಕನಕಪುರ ಪಂಚಾಯತ್‌ನ ಜಲ್ಮಿಲಿಕ್ ಗ್ರಾಮದ ನಿವಾಸಿ ತಾಹಿರಾ ಬೇಗಂ (20) ಖಾಸಗಿ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಾಹಿರಾ ಅವರು 2 ತಿಂಗಳ ಗರ್ಭಿಣಿಯಾಗಿದ್ದಾಗ ಹೊಟ್ಟೆಯಲ್ಲಿ ನಾಲ್ಕು ಮಕ್ಕಳಿರುವುದು ಗೊತ್ತಾಗಿದೆ. ಬಳಿಕ ವೈದ್ಯರ ಬಳಿ ತಪಾಸಣೆಗೆ ಹೋದಾಗ ನಾಲ್ಕಲ್ಲ ಐದು ಮಕ್ಕಳಿರುವುದು ಗೊತ್ತಾಯಿತು. ಆರಂಭದಲ್ಲಿ ಗರ್ಭಿಣಿ ತುಂಬಾ ಹೆದರುತ್ತಿದ್ದಳು, ಆದರೆ ವೈದ್ಯರು ಅವಳಿಗೆ ಭರವಸೆ ನೀಡಿ ಆತ್ಮವಿಶ್ವಾಸ ತುಂಬಿದ್ದಾರೆ. ಪರಿಣಾಮ ಐದು ಹೆಣ್ಮಕ್ಕಳಿಗೆ ನಾರ್ಮಲ್ ಡೆಲಿವರಿ ಮೂಲಕ ಜನ್ಮ ನೀಡಿದ್ದಾರೆ.

ತಾಹಿರಾ ಎರಡನೇ ಬಾರಿಗೆ ತಾಯಿಯಾಗಿದ್ದು, ಈಗಾಗಲೇ ಮೂರು ವರ್ಷದ ಮಗ ಇದ್ದಾನೆ. ಒಟ್ಟು ಆರು ಮಕ್ಕಳ ತಾಯಿಯಾಗಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ