ಹಸಿರು ಫೌಂಡೇಶನ್:  ಎತ್ತಿನಭುಜ ಸ್ವಚ್ಛತಾ, ಬೀಜ ಬಿತ್ತನೆ ಕಾರ್ಯಕ್ರಮ - Mahanayaka

ಹಸಿರು ಫೌಂಡೇಶನ್:  ಎತ್ತಿನಭುಜ ಸ್ವಚ್ಛತಾ, ಬೀಜ ಬಿತ್ತನೆ ಕಾರ್ಯಕ್ರಮ

hasiru foundation
26/05/2025

ಮೂಡಿಗೆರೆ: ಹಸಿರು ಫೌಂಡೇಶನ್ ವತಿಯಿಂದ ಮೂಡಿಗೆರೆ ತಾಲ್ಲೂಕು ಊರುಬಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರವಾಸಿ ತಾಣ  ಎತ್ತಿನಭುಜ ಸ್ವಚ್ಛತಾ ಕಾರ್ಯಕ್ರಮ ಹಾಗೂ ಬೀಜ ಬಿತ್ತನೆ ಕಾರ್ಯಕ್ರಮ ನೆರವೇರಿತು.

ಈ ಕಾರ್ಯಕ್ರಮದಲ್ಲಿ ನಾನಾ ರಾಜ್ಯದ ಪರಿಸರ ಪ್ರೇಮಿಗಳು ಆಗಮಿಸಿ ಮಳೆಯನ್ನು ಲೆಕ್ಕಿಸದೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಈ ಸಂದರ್ಭದಲ್ಲಿ ಹಸಿರು ಫೌಂಡೇಶನ್ ಅಧ್ಯಕ್ಷ ರತನ್ ಊರುಬಗೆ ಮಾತನಾಡಿ,  ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ  ಎತ್ತಿನ ಭುಜದಲ್ಲಿ ಪ್ಲಾಸ್ಟಿಕ್ ಬಾಟಲ್ ಗಳ ರಾಶಿ ಕಂಡು ಬೇಸರ ವ್ಯಕ್ತಪಡಿಸಿದರು.

ಟ್ರಕ್ಕಿಂಗ್ ಬರುವವರು ವಿದ್ಯಾವಂತರೆ ಜಾಸ್ತಿ ಆದರೇ ಅವರು ಎತ್ತಿನ ಭುಜ ಪರಿಸರವನ್ನು ಕಲುಷಿತ ಗೊಳಿಸಿರುವುದನ್ನು ನೋಡಿದರೆ ಅವಿದ್ಯಾವಂತರನ್ನೇ ನಾಚಿಸುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅರಣ್ಯ ಸಚಿವರು ಈಶ್ವರ್ ಖಂಡ್ರೆ ಅವರಿಗೆ  ಎತ್ತಿನ ಭುಜ ಪ್ರದೇಶದಲ್ಲಿ ಪ್ಲಾಸ್ಟಿಲ್ ಹಾಗೂ ಬಾಟಲ್ ಗಳ ಕಡಿವಾಣಕ್ಕೆ ಬ್ರೇಕ್ ಹಾಕಿಸುವ ನಿಯಮ ಜಾರಿಗೆ ತರುವಂತೆ ಮನವಿ ಮಾಡಿದರು.  ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ