ತಾಳಿಕಟ್ಟಿದ ಕೆಲವೇ ನಿಮಿಷಗಳಲ್ಲಿ ವರ ಹೃದಯಾಘಾತದಿಂದ ಸಾವು! - Mahanayaka

ತಾಳಿಕಟ್ಟಿದ ಕೆಲವೇ ನಿಮಿಷಗಳಲ್ಲಿ ವರ ಹೃದಯಾಘಾತದಿಂದ ಸಾವು!

bagalakot news
17/05/2025

ಬಾಗಲಕೋಟೆ: ಮದುವೆಯ ಸಂಭ್ರಮದಲ್ಲಿದ್ದ ವರ ಮದುವೆ ಮನೆಯಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ಶನಿವಾರ ನಡೆದಿದೆ.

ಪ್ರವೀಣ ಕುರಣಿ ಎಂಬ ಯುವಕ ಮೃತಪಟ್ಟ ಯುವಕನಾಗಿದ್ದಾನೆ. ಕಳೆದ ರಾತ್ರಿ ಮದುವೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ. ಎಲ್ಲರೊಂದಿಗೆ ಖುಷಿ ಖುಷಿಯಾಗಿ ಡಾನ್ಸ್ ಕೂಡ ಮಾಡಿದ್ದ.  ಬೆಳಿಗ್ಗೆ 10 ಗಂಟೆಗೆ ದೇವರ ಪೂಜೆ ಕೈಗೊಂಡು ನಂತರ ವಧುವಿಗೆ ತಾಳಿಕೂಡ ಕಟ್ಟಿದ್ದ.

ನಂತರ ಅಕ್ಷತಾ ಕಾರ್ಯಕ್ರಮವೆಲ್ಲ ಮುಗಿದು ವೇದಿಕೆ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ವಧುವರರು ಪರಸ್ಪರ ಹಾರ ಬದಲಿಸಿಕೊಂಡರು. ಇನ್ನೇನು ಎಲ್ಲರೂ ಶುಭ ಹಾರೈಸುವ ಕಾರ್ಯಕ್ರಮ ಆರಂಭವಾಗಬೇಕಿತ್ತು. ಅಷ್ಟರಲ್ಲಿ ಪ್ರವೀಣ್ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ.

ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ  ಅದಾಗಲೇ ಅವರು ಮೃತಪಟ್ಟಿದ್ದರು.  ಸಂತಸ ಸಂಭ್ರಮದ ಮನೆಯಲ್ಲಿ ಇದೀಗ ಶೋಕ ಮಡುಗಟ್ಟಿದೆ. ಸಣ್ಣ ವಯಸ್ಸಿನಲ್ಲೇ ಸಾವನ್ನಪ್ಪಿರುವ ಯುವಕರ ಬಗ್ಗೆ ನೂರಾರು ಉತ್ತರವಿಲ್ಲದ ಪ್ರಶ್ನೆಗಳು ಕೇಳಿ ಬರುತ್ತಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ