ಎಚ್ ಡಿಎಫ್ ಸಿ ಬ್ಯಾಂಕ್ ಗೆ ಮೂರು ನಾಮಹಾಕಿದ ವೈಭವ್ ಶರ್ಮಾ - Mahanayaka

ಎಚ್ ಡಿಎಫ್ ಸಿ ಬ್ಯಾಂಕ್ ಗೆ ಮೂರು ನಾಮಹಾಕಿದ ವೈಭವ್ ಶರ್ಮಾ

18/12/2020

ನವದೆಹಲಿ: ಎಚ್ ಡಿಎಫ್ ಸಿ ಮತ್ತು ಇತರ ಬ್ಯಾಂಕ್ ಗಳಿಗೆ 300 ಕೋಟಿ ರೂಪಾಯಿ ವಂಚಿಸಿದ್ದ  ಝಿನಿಕಾ ಕಾರು ಸಂಸ್ಥೆಯ  ಚೀಫ್ ಫೈನಾನ್ಸ್ ಆಫೀಸರ್ ವೈಭವ್ ಶರ್ಮಾನನ್ನು  ಆರ್ಥಿಕ ಅಪರಾಧ ದಳ ಶುಕ್ರವಾರ ಬಂಧಿಸಿದೆ.

ಎಚ್ ಡಿಎಫ್ ಸಿ ಬ್ಯಾಂಕ್ ಗೆ ಮೂರು ನಾಮ ಹಾಕಿರುವ ವೈಭವ್ ಶರ್ಮಾ 102 ಕೋಟಿ ರೂಪಾಯಿ ವಂಚಿಸಿದ್ದಾನೆ ಎಂದು ಬ್ಯಾಂಕ್ ಆರೋಪಿಸಿದೆ. ಬ್ಯಾಂಕ್ ನ ದೂರಿನಂತೆ ದೆಹಲಿ ಪೊಲೀಸ್ ವಿಭಾಗದ ಆರ್ಥಿಕ ಅಪರಾಧ ದಳ ಶರ್ಮಾನನ್ನು ಬಂಧಿಸಿದೆ.

2007ರಲ್ಲಿ ಸಾಲ ಪಡೆದಿದ್ದ ಝೆನಿಕಾ ಕಂಪನಿ,  ಆಡಿ ಕಾರು ಮಾರಾಟ ಮತ್ತು ಗ್ರಾಹಕರಿಗೆ ನೆರವು ನೀಡುತ್ತಿತ್ತು ಎಂದು ವಿವರಿಸಲಾಗಿತ್ತು ಎಂದು ಹೇಳಲಾಗಿದೆ.  2018ರವರೆಗೆ ಎಲ್ಲವೂ ಸರಿಯಾಗಿತ್ತು. ಆದರೆ ಈ ಮಧ್ಯೆ ಬ್ಯಾಂಕ್ ಅಧಿಕಾರಿಗಳು ಶೋರೂಂಗೆ ಭೇಟಿ ನೀಡಿದಾಗ 200 ಕಾರುಗಳ ಶೋರೂಂ ನಲ್ಲಿ ಕೇವಲ 29 ಕಾರುಗಳು ಮಾತ್ರವೇ ಕಂಡು ಬಂದಿದ್ದು,  ತಾವು ಮೋಸಹೋಗಿರುವುದು ಬ್ಯಾಂಕ್ ಅಧಿಕಾರಿಗಳಿಗೆ ಅರಿವಾಗಿದೆ. ಈ ಹಿನ್ನೆಲೆಯಲ್ಲಿ ಶರ್ಮಾ ಮತ್ತು ಮತ್ತಿಬ್ಬರ ವಿರುದ್ಧ ಬ್ಯಾಂಕ್ ಅಧಿಕಾರಿಗಳು ದೂರು ನೀಡಿದ್ದಾರೆ.

ಬಡವರು ಸಣ್ಣ ಮೊತ್ತದ ಸಾಲ ಪಡೆಯಲು ಬ್ಯಾಂಕ್ ಹೋದಾಗ ಸಾವಿರಾರು ದಾಖಲೆ ಕೇಳಿ ಅಲೆದಾಡಿಸುವ ಬ್ಯಾಂಕ್ ಅಧಿಕಾರಿಗಳು, ದೊಡ್ಡವರಿಗೆ ಕಣ್ಣು ಮುಚ್ಚಿ ಸಾಲಕೊಡುತ್ತಿದ್ದಾರೆ. ಇದರಿಂದಾಗಿ ಬ್ಯಾಂಕ್ ಗಳು ಮೇಲಿಂದ ಮೇಲೆ ನಾಮ ಹಾಕಿಸಿಕೊಳ್ಳುತ್ತಲೇ ಇವೆ ಈ ನಡುವೆ ಬ್ಯಾಂಕ್ ಗಳ ಈ ಯಡವಟ್ಟುಗಳಿಂದ ಗ್ರಾಹಕರು ಬ್ಯಾಂಕ್ ನಲ್ಲಿ ಹಣವಿಡಲು ಭಯಪಡುವಂತಾಗಿದೆ.

ಇತ್ತೀಚಿನ ಸುದ್ದಿ