ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಸೋಲಲು ನನ್ನ ಪಕ್ಷದವರೇ ಕಾರಣ | ಸಿದ್ದರಾಮಯ್ಯ  ಹೇಳಿಕೆ - Mahanayaka

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಸೋಲಲು ನನ್ನ ಪಕ್ಷದವರೇ ಕಾರಣ | ಸಿದ್ದರಾಮಯ್ಯ  ಹೇಳಿಕೆ

18/12/2020

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ಸೋತ ವಿಚಾರ ಹಳೆಯದಾದರೂ, ಅದು ಮತ್ತೆ ಮತ್ತೆ ರಾಜ್ಯ ರಾಜಕಾರಣದಲ್ಲಿ ಚರ್ಚೆಗೀಡಾಗುತ್ತಲೇ ಇದೆ. ಸಿದ್ದರಾಮಯ್ಯನವರನ್ನು ಟೀಕಿಸಲು ಪ್ರಮುಖವಾಗಿ ಬಿಜೆಪಿ ಮುಖಂಡರು ಇದೇ ವಿಚಾರವನ್ನು ನಿರಂತರವಾಗಿ ಬಳಸಿದ್ದಾರೆ. ಆದರೆ, ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ  ಸಿದ್ದರಾಮಯ್ಯನವರು ಮತ್ತೆ ಹೇಳಿಕೆ ನೀಡಿದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರ ಸೋಲು ವಿಚಾರ ಮತ್ತೆ ಚರ್ಚೆಗೆ ಕಾರಣವಾಗಿದೆ.


Provided by

 ಚಾಮುಂಡೇಶ್ವರಿ ಕ್ಷೇತ್ರ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯನವರು, ನನ್ನ ಸೋಲಿಗೆ ನನ್ನ ಪಕ್ಷದವರೇ ಕಾರಣ ಎಂದು  ಸಿದ್ದರಾಮಯ್ಯ ಆಕ್ರೋಶ ವ್ಯಕ್ತಡಿಸಿದ್ದಾರೆ ಎಂದು ವರದಿಯಾಗಿದೆ. ಚಾಮುಂಡೇಶ್ವರಿ ಕ್ಷೇತ್ರದ ಜನರೇ ನೀವೇ ಹೇಳಿ, ನನ್ನನ್ನು ಸೋಲಿಸಲು ಕಾರಣ ಏನು ಹೇಳಿ? ನನ್ನ ಎದುರು ನಿಂತ ಅಭ್ಯರ್ಥಿಗಳ ಪ್ಲಸ್ ಪಾಯಿಂಟ್ ಏನು ಎಂದು ನೀವೇ ಹೇಳಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಸೋಲಲು ನನ್ನ ಪಕ್ಷದವರೇ ಕಾರಣ. ಅವರ ಒಳಸಂಚಿನಿಂದಾಗಿ ನಾನು ಸೋತೆ ಎಂದು ಹೆಸರು ಬಳಸದೇ ಸಿದ್ದರಾಮಯ್ಯ ಹೇಳಿದ್ದು,  ಬಾದಾಮಿಯ ಜನತೆ ನನ್ನ ಕೈ ಹಿಡಿದಿದ್ದಾರೆ. ಅವರು ಕೈ ಬಿಟ್ಟಿದ್ದರೆ ನನ್ನ ರಾಜಕೀಯ ಜೀವನವೇ ಕತ್ತಲಾಗಿ ಹೋಗುತ್ತಿತ್ತು ಎಂದು ಸಿದ್ದರಾಮಯ್ಯ ಹೇಳಿದರು.


Provided by

ಇತ್ತೀಚಿನ ಸುದ್ದಿ