ಮನೆಗಳಿಗೆ ತೆರಳಿ ದಾಖಲೆ ಸಂಗ್ರಹಿಸುವ ಹೆಳವ ಜನಾಂಗದವರ ಸೇವೆ ಅವಿಸ್ಮರಣೀಯ: ಡಾ.ಶರಣು ಗದ್ದುಗೆ - Mahanayaka
11:54 AM Saturday 14 - December 2024

ಮನೆಗಳಿಗೆ ತೆರಳಿ ದಾಖಲೆ ಸಂಗ್ರಹಿಸುವ ಹೆಳವ ಜನಾಂಗದವರ ಸೇವೆ ಅವಿಸ್ಮರಣೀಯ: ಡಾ.ಶರಣು ಗದ್ದುಗೆ

helavara
15/11/2022

ಶಹಾಪುರ: ನಮ್ಮ ಪೂರ್ವಜರ ಕಾಲದಿಂದಲೂ, ನಮ್ಮ ತಾತ ಮುತ್ತಾತ ಸೇರಿದಂತೆ ನಮ್ಮ ಒಕ್ಕಲು ಮನೆತನಗಳ ಆಸ್ತಿ ಮತ್ತು ಚರಾಸ್ತಿಗಳ ದಾಖಲೆಗಳನ್ನು ಸಂಗ್ರಹಿಸಿಡುವ ಏಕೈಕ ವ್ಯಕ್ತಿ ಹೆಳವ. ಪ್ರತಿ ವರ್ಷಕ್ಕೊಮ್ಮೆ ತಮ್ಮ ಕುಲಕಸುವಾದ ವಂಶಾವಳಿಯ ಹೇಳುವ ಮೂಲಕ ಮನೆಗಳಿಗೆ ತೆರಳಿ  ದಾಖಲೆಗಳನ್ನು ಸಂಗ್ರಹಿಸಿರುವ ಇವರ ಸೇವೆ ಅವಿಸ್ಮರಣೆ ಎಂದು ಚರಬಸವೇಶ್ವರ ಸಂಸ್ಥಾನದ ಪೂಜ್ಯರು ಡಾ: ಶರಣು ಗದ್ದುಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ಶಹಾಪೂರ ನಗರದ ಚರಬಸವೇಶ್ವರ ಸಂಸ್ಥಾನ ಗದ್ದುಗೆಯಲ್ಲಿ ಯಾದಗಿರಿ ಜಿಲ್ಲಾ ಹೆಳವ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ  ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಶ್ರೀ ತಿಪ್ಪಣ್ಣ ಹೆಳವರ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಜೊತೆಗೆ ಶಹಾಪುರ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪೂರ ಮಾತನಾಡಿ, ಹಿಂದುಳಿದ ಅಲೆಮಾರಿ ಹೆಳವ ಜನಾಂಗದ ಹಿರಿಯ ವ್ಯಕ್ತಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಯಾದಗಿರಿ ಜಿಲ್ಲೆಗೆ ಮೆರುಗು ತಂದಿದೆ, ಇದು ನಮ್ಮ ಹೆಮ್ಮೆ ಎಂದರು. ಜೊತೆಗೆ ಹಿರಿಯ ಸಾಹಿತಿಗಳಾದ ಸಿದ್ದರಾಮ ಹೊನ್ಕಲ್, ಹಿರಿಯ ವೈದ್ಯಾಧಿಕಾರಿಗಳಾದ ಡಾ.ಚಂದ್ರಶೇಖರ್ ಸುಬೇದಾರ್ ಮಾತನಾಡಿದರು.

ಹೆಳವ ಸಮಾಜದ ಪೀಠಾಧಿಪತಿಗಳಾದ ಶ್ರೀ ಬಸವ ಬೃಂಗೇಶ್ವರ ಸ್ವಾಮೀಗಳು, ಬಸವರಾಜ ಗುರೂಜಿ ನಾಲತವಾಡ, ಶಂಕರಲಿಂಗ ಸ್ವಾಮಿಗಳು, ವೀರಶೈವ ಸಮಾಜದ ಉಪಾಧ್ಯಕ್ಷ ಮಹೇಶ್ ಆನೆಗುಂದಿ, ಸಾಹಿತ್ಯ ಪರಿಷತ್ತು ಅಧ್ಯಕ್ಷ ರವೀಂದ್ರ ಹೊಸಮನಿ, ಎಚ್.ಎನ್. ಗೋಗಿ,ಸುನಿಲ್ ಕಾಂತ್ ಹೆಳವರ, ಮಲ್ಲಿಕಾರ್ಜುನ್ ಬಿ.ಹೆಚ್. ಹೆಳವರ ಕಲಬುರ್ಗಿ, ಶ್ರೀಮಂತ ಸೌಂದರ್ಗೆ,  ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದನೂರ, ತಿಪ್ಪಣ್ಣ ಹೆಳವರ, ಅಶೋಕ ಗಂಜ್ಯಾಳ, ಬಸವರಾಜ ಶಿನ್ನೂರ, ಮೌನೇಶ ಸುರಪುರ ಕರ್, ಅಯ್ಯಣ್ಣ ಹೂಗಾರ, ವೇದಿಕೆ ಮೇಲಿದ್ದರು.

ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾಧ್ಯಕ್ಷ ಬಾಬು ಹೇಳವರ, ಕಲಬುರ್ಗಿ ಜಿಲ್ಲಾಧ್ಯಕ್ಷ ಸಾಯಬಣ್ಣ ಹೇಳವರ, ಬಸವರಾಜ್ ಯಾಳಗಿ, ಶಿವರಾಜ ನಗನೂರ, ಶಂಕ್ರಪ್ಪ ಬಾಲಛಡಿ, ನೆಹರೂ ಹಳಿಸಗರ, ಭೀಮಣ್ಣ ಅಂಚಿನಾಳ, ಯಾದಗಿರಿ ಜಿಲ್ಲಾಧ್ಯಕ್ಷರಾದ ಡಾ.ಹಣಮಂತರಾಯ ಹಳಿಸಗರ,ದೇವಪ್ಪ ನಗನೂರ, ಮಲ್ಲಣ್ಣ ಕಡಿಮನಿ,ಶ್ರೀಕಾಂತ್ ಯಾಳಗಿ,ಯಲ್ಲಯ್ಯ ಸಾಹುಕಾರ ರಾಜಲಬಂಡಾ, ಯಲ್ಲಪ್ಪ ಕೋರಿ, ಮಹೇಶ್ ಯಾದಗಿರಿ, ಶಿವರಾಜ ದೋರನಹಳ್ಳಿ, ಸೇರಿದಂತೆ ಹಲವರು ಇದ್ದರು. ರಾಘು ಮಾಸ್ಟರ್  ನಿರೂಪಿಸಿ ವಂದಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ