ಹೆಚ್ ಐವಿ ಸೋಂಕಿತ ಮಹಿಳೆಗೆ ಹೆರಿಗೆ ಮಾಡಿಸಲು ಹಿಂದೇಟು ಹಾಕಿದ ವೈದ್ಯರು: ಮಗು ಸಾವು
ಹೆರಿಗೆ ನೋವು ಕಾಣಿಸಿಕೊಂಡು ನರಳಾಡುತ್ತಿದ್ದ ಹೆಚ್ ಐವಿ ಸೋಂಕಿತ ಮಹಿಳೆಯನ್ನು ಪರೀಕ್ಷಿಸಲು ವೈದ್ಯರು ಮುಂದಾಗದ ಹಿನ್ನೆಲೆಯಲ್ಲಿ ಮಗು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಮಹಿಳೆ ಹೆಚ್ ಐವಿ ಪೀಡಿತೆ ಅನ್ನೋ ಕಾರಣಕ್ಕೆ ವೈದ್ಯರು ಹೆರಿಗೆ ಮಾಡಿಸಲು ಮುಂದಾಗಲಿಲ್ಲ, ರೋಗಿಯನ್ನು ಮುಟ್ಟಲು ಹಿಂದೇಟು ಹಾಕಿದ್ದಾರೆ. ಬಳಿಕ ಆಸ್ಪತ್ರೆಯ ಮುಖ್ಯಸ್ಥರ ಮಧ್ಯಸ್ಥಿಕೆಯ ನಂತರವೇ ಫಿರೋಜಾಬಾದ್‌ನ ಆಸ್ಪತ್ರೆಯ ವೈದ್ಯರು ಮಹಿಳೆಗೆ ಹೆರಿಗೆ ಮಾಡಿದ್ದಾರೆ. ಮಗು ಹುಟ್ಟಿದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಮೊದಲು ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಹೆರಿಗೆ ಮಾಡಿಸಲು 20 ಸಾವಿರ ರೂಪಾಯಿ ನೀಡುವಂತೆ ಅವರು ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಮಹಿಳೆಯನ್ನು ಮುಟ್ಟಲು ಕೂಡ ಹಿಂಜರಿಯುತ್ತಿದ್ದರು. , ಆಸ್ಪತ್ರೆಯ ಉಸ್ತುವಾರಿಯನ್ನು ಕರೆದಾಗ ಅವರು ಮಧ್ಯಪ್ರವೇಶಿಸಿ, ಹೆರಿಗೆಗೆ ವ್ಯವಸ್ಥೆ ಮಾಡಿಸಿದರು ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka