ಗಾಝಾವನ್ನು ಅಮೆರಿಕ ತೆಗೆದುಕೊಂಡರೆ ಆ ಬಳಿಕ ಅಲ್ಲಿ ಫೆಲೆಸ್ತೀನಿಯರಿಗೆ ಹಕ್ಕು ಇರಲ್ಲ: ಟ್ರಂಪ್ ಹೇಳಿಕೆ

ಗಾಝಾವನ್ನು ಅಮೆರಿಕ ತೆಗೆದುಕೊಂಡರೆ ಆ ಬಳಿಕ ಅಲ್ಲಿ ಫೆಲೆಸ್ತೀನಿಯರಿಗೆ ಹಕ್ಕು ಇರುವುದಿಲ್ಲ ಎಂದು ಅಮೆರಿಕಾದ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಗಾಝಾದಿಂದ ತೆರವುಗೊಳ್ಳುವ ಫೆಲೆಸ್ತೀನಿಯರಿಗೆ ಅರಬ್ ರಾಷ್ಟ್ರಗಳಲ್ಲಿ ಮನೆ ಇತ್ಯಾದಿ ಸೌಕರ್ಯವನ್ನು ಒದಗಿಸಿ ಕೊಡುವುದಾಗಿ ಅವರು ಫಾಕ್ಸ್ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಹಾಗೆಯೇ ಅಮೆರಿಕಕ್ಕೆ ಭೇಟಿ ನೀಡಿರುವ ಜೋರ್ಡಾನ್ ನ ದೊರೆ ಅಬ್ದುಲ್ಲ ಅವರ ಜೊತೆ ಟ್ರಂಪ್ ಮಾತುಕತೆ ನಡೆಸಲಿದ್ದಾರೆ. ಈ ಮಾತುಕತೆಯಲ್ಲಿ ಗಾಝಾದ ಮಂದಿಯನ್ನು ಬೇರೆ ರಾಷ್ಟ್ರಗಳಿಗೆ ಕಳುಹಿಸಿಕೊಡುವ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ವೇಳೆ ಕದನ ವಿರಾಮ ಒಪ್ಪಂದವನ್ನು ಇಸ್ರೇಲ್ ನಿರಂತರ ಉಲ್ಲಂಘಿಸುತ್ತಿರುವುದರಿಂದಾಗಿ ಒತ್ತೆಯಾಳುಗಳ ಬಿಡುಗಡೆಯನ್ನು ತತ್ಕಾಲಕ್ಕೆ ಸ್ಥಗಿತಗೊಳಿಸಿರುವುದಾಗಿ ಹಮಾಸ್ ಹೇಳಿರುವ ಬೆನ್ನಿಗೆ ಟ್ರಂಪ್ ಅದನ್ನು ಖಂಡಿಸಿದ್ದಾರೆ. ಉಳಿದಿರುವ ಒತ್ತೆಯಾಳುಗಳನ್ನು ಫೆಬ್ರವರಿ 15 ಶನಿವಾರದಂದು ರಾತ್ರಿ 12ರ ಒಳಗೆ ಹಮಾಸ್ ಬಿಟ್ಟುಕೊಡದಿದ್ದರೆ ಕದನ ವಿರಾಮ ಒಪ್ಪಂದವನ್ನು ರದ್ದುಗೊಳಿಸಿ ಮರಳಿ ಗಾಝಾವನ್ನು ನರಕ ಮಾಡುವುದಾಗಿ ಟ್ರಂಪ್ ಎಚ್ಚರಿಸಿದ್ದಾರೆ. ಈ ಸಮಯ ಮಿತಿಯ ಬಗ್ಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರಿಗೆ ನಾನು ತಿಳಿಸುವೆ ಎಂದು ಕೂಡ ಅವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj