ಮಹಾಕುಂಭಮೇಳದಲ್ಲಿ ಜನಸಾಗರ: ಪ್ರಮುಖ ಹೈವೇಗಳಲ್ಲಿ ಗಂಟೆಗಟ್ಟಲೆ ವಾಹನಗಳು ಜಾಮ್

ಮಹಾ ಕುಂಭಮೇಳವು ಒಂದಲ್ಲ ಒಂದು ನಕಾರಾತ್ಮಕ ಘಟನೆಗಳಿಗಾಗಿ ಸುದ್ದಿಗೆ ಗ್ರಾಸವಾಗುತ್ತಲೇ ಇದೆ. ಪ್ರಯಾಗ್ ರಾಜ್ ಅಯೋಧ್ಯಾ ಕಾಶಿ ಮುಂತಾದ ನಗರಗಳನ್ನು ಜೋಡಿಸುವ ಪ್ರಮುಖ ಹೈವೇಗಳಲ್ಲಿ ಗಂಟೆಗಟ್ಟಲೆ ವಾಹನಗಳು ಜಾಮ್ ಆಗಿವೆ. ಅಸಂಖ್ಯ ಮಂದಿ ಇಡೀ ರಾತ್ರಿಯನ್ನು ರಸ್ತೆಯಲ್ಲೇ ಕಳೆದಿದ್ದಾರೆ. ದಿನದ ಹಿಂದೆ ರಾತ್ರಿ ಏಳು ಗಂಟೆಗೆ ನಾನು ನನ್ನ ಯಾತ್ರೆಯನ್ನು ಆರಂಭಿಸಿದೆ.
ಮರುದಿನ ಬೆಳಗ್ಗೆ ಆಗುವಾಗ ಕೇವಲ 40 ಕಿ.ಮೀ ಮಾತ್ರವೇ ಸಂಚರಿಸಲು ತನಗೆ ಸಾಧ್ಯವಾಗಿದೆ ಎಂದು ಭಕ್ತರೋರ್ವರು ಮಾಧ್ಯಮದೊಂದಿಗೆ ಹೇಳಿರುವುದು ವರದಿಯಾಗಿದೆ.
ಕೇವಲ ನಾಲ್ಕು ಗಂಟೆಗಳಷ್ಟೇ ಬೇಕಾಗಿದ್ದ ಯಾತ್ರೆಗೆ 12 ಗಂಟೆಗಳು ಬೇಕಾದುವು ಎಂದು ಇನ್ನೋರ್ವ ಭಕ್ತರು ಹೇಳಿದ್ದಾರೆ. ಟ್ರಾಫಿಕ್ ಜಾಮ್ ನಿಂದಾಗಿ ಪ್ರಯಾಗ್ ರಾಜ್ ನ ಜನರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಟ್ರಾಫಿಕ್ ಜಾಮ್ ನಿಂದಾಗಿ ಹಾಲು ಸಹಿತ ಅಗತ್ಯ ವಸ್ತುಗಳ ಪೂರೈಕೆ ಮತ್ತು ಮಾರಾಟಕ್ಕೆ ತೊಂದರೆಯಾಗಿದೆ. ಇದರಿಂದಾಗಿ ಪ್ರಯಾಗ್ ರಾಜ್ ನಿಂದ ಹೊರಟು ಇತರ ರಾಜ್ಯಗಳಿಗೆ ಹೋಗುವವರು ಈ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡು ಒದ್ದಾಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj