"ಕಣ್ಣೀರು" ಹೇಡಿಯ ಪ್ರಮುಖ ಅಸ್ತ್ರ!! | ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಕಿಡಿ - Mahanayaka

“ಕಣ್ಣೀರು” ಹೇಡಿಯ ಪ್ರಮುಖ ಅಸ್ತ್ರ!! | ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಕಿಡಿ

pm modi
22/05/2021

ಬೆಂಗಳೂರು: ಆರೋಗ್ಯ ಕಾರ್ಯಕರ್ತರೊಂದಿಗಿನ ಸಂವಾದದ ವೇಳೆ ಪ್ರಧಾನಿ ನರೇಂದ್ರ ಮೋದಿ ಕಣ್ಣೀರು ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಇದು ಅದ್ಬುತ ನಟನ ಕೌಶಲ್ಯ ಎಂದು ಟೀಕಿಸಿದೆ.

ಈ ಬಗ್ಗೆ ಇಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದ್ದು, “ಕಣ್ಣೀರು” ಹೇಡಿಯ ಪ್ರಮುಖ ಅಸ್ತ್ರ!! ಎದುರಿಗಿದ್ದ ಕ್ಯಾಮೆರಾ ಹಾಗೂ ಟೆಲಿಪ್ರಾಂಪ್ಟರ್‌ ನೋಡಿಕೊಂಡು ಕಣ್ಣೀರು ಸುರಿಸುವುದು ಅದ್ಬುತ ನಟನಾ ಕೌಶಲ್ಯ! ಪ್ರಧಾನಿ ಮೋದಿ ಅವರೇ, ಜನತೆಗೆ ಬೇಕಿರುವುದು ನಿಮ್ಮ ಕಣ್ಣೀರಲ್ಲ. ಆಕ್ಸಿಜನ್, ಲಸಿಕೆ, ವೈದ್ಯಕೀಯ ವ್ಯವಸ್ಥೆ, ಚಿಕಿತ್ಸೆ, ಆರ್ಥಿಕ ನೆರವು. ಇದ್ಯಾವುದನ್ನೂ ನೀಡದೆ ಎರಡು ಹನಿ ಕಣ್ಣೀರ ನಾಟಕದಿಂದ ಜನಾಕ್ರೋಶ ತಣಿಸುವ ತಂತ್ರ ಬಿಡಿ ಎಂದು ಹೇಳಿದೆ.

ಸದಾ ಜನತೆಯ ದಿಕ್ಕುತಪ್ಪಿಸುತ್ತಲೇ ಬಂದಿರುವ ಬಿಜೆಪಿ ತನ್ನ ಫೂಲ್ ಕಿಟ್ ಮೂಲಕ ಕಾಂಗ್ರೆಸ್ ಮೋದಿ ಹೆಸರು ಕೆಡಿಸಲು ಯತ್ನಿಸಿತ್ತು ಎಂದು ಸುಳ್ಳು ಬಿತ್ತರಿಸಿತ್ತು. ಈಗಾಗಲೇ ಕೆಟ್ಟಿರುವ ಸ್ವಯಂಘೋಷಿತ ನಕಲಿ ವಿಶ್ವನಾಯಕನ ಹೆಸರು ಕೆಡಿಸಲು ಅವಕಾಶವೆಲ್ಲಿದೆ!! ಬಿಜೆಪಿಗೆ ಜನರ ಪ್ರಾಣದ ಚಿಂತೆಗಿಂತ, ಕೆಡುತ್ತಿರುವ ಹೆಸರಿನ ಬಗ್ಗೆಯೇ ಚಿಂತೆಯಾಗಿದೆ! ಎಂದು ಟೀಕಿಸಿದೆ.


Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by

ಕರೋನಾ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿ ಛಿಮಾರಿ ಹಾಕಿಸಿಕೊಳ್ಳುತ್ತಿರುವ ನಕಲಿ ‘ವಿಶ್ವನಾಯಕ’ನ ಹೆಸರು ಉಳಿಸಲು ಟೂಲ್ ಕಿಟ್ ಎಂಬ ಅಡ್ಡದಾರಿ ಹಿಡಿದಿದ್ದ ಬಿಜೆಪಿ ಪಕ್ಷದ ಸಂಬಿತ್ ಪಾತ್ರಾ ಎಂಬ ಟ್ವೀಟ್‌ ನ್ನು ‘ದಿಕ್ಕುತಪ್ಪಿಸುವುದಾಗಿದೆ’ ಎಂದು ಟ್ವಿಟರ್ ಗುರುತಿಸಿದೆ. ಕಾಂಗ್ರೆಸ್ ತೇಜೋವಧೆಯ ಪ್ರಯತ್ನಕ್ಕೆ ಸೋಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

ಇತ್ತೀಚಿನ ಸುದ್ದಿ