ಆತಂಕಕ್ಕೆ ಕಾರಣವಾಗಿದ್ದ ಚಿರತೆ ಕೊನೆಗೂ ಸೆರೆ
ಬ್ರಹ್ಮಾವರ: ಮಟಪಾಡಿ ಪರಿಸರದಲ್ಲಿ ಹಲವು ಸಮಯಗಳಿಂದ ಜನರ ಆತಂಕಕ್ಕೆ ಕಾರಣವಾಗಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಕೆಲವು ತಿಂಗಳ ಹಿಂದೆ ಮಟಪಾಡಿ ಪರಿಸರದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದ್ದು, ಹಲವು ಮನೆಯ ಸಾಕು ನಾಯಿಗಳನ್ನು ಬೇಟೆಯಾಡಿದ್ದವು. ಇದರಿಂದ ಸ್ಥಳೀಯರು ಸಾಕಷ್ಟು ಆತಂಕಕ್ಕೆ ಒಳಗಾಗಿ, ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಅದರಂತೆ ಉಡುಪಿ ವಲಯ ಅರಣ್ಯ ಇಲಾಖೆಯವರು ವಾರದ ಹಿಂದೆ ಮಟಪಾಡಿ ಶ್ರೀನಿಕೇತನ್ ಶಾಲೆಯ ಸಮೀಪದ ಹಾಡಿಯಲ್ಲಿ ನಾಯಿ ಜೊತೆ ಬೋನನ್ನು ಇರಿಸಿದ್ದರು.


Provided by

Provided by

Provided by

Provided by

Provided by

Provided by

Provided by

Provided by

Provided by

Provided by

Provided by
ಮಂಗಳವಾರ ರಾತ್ರಿ ಬೇಟೆ ಅರಸಿ ಬಂದ 4-5ವರ್ಷ ಪ್ರಾಯದ ಹೆಣ್ಣು ಚಿರತೆಯು ಬೋನಿನೊಳಗೆ ಸೆರೆಯಾಗಿದೆ. ಬುಧವಾರ ಬೆಳಗ್ಗೆ ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು. ಅದರಂತೆ ಉಪವಲಯ ಅರಣ್ಯಾಧಿಕಾರಿ ಹರೀಶ್ ನೇತೃತ್ವದ ಸಿಬ್ಬಂದಿ, ಹಂದಾಡಿ ಗ್ರಾಪಂ ಸದಸ್ಯರಾದ ಅಶೋಕ್ ಪೂಜಾರಿ, ಪವಿತ್ರ ನಾಯಕ್, ಭಾನುಮತಿ, ಚಂದ್ರಶೇಖರ ಪೂಜಾರಿ, ಜ್ಯೋತಿ ಬಾಯಿ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಚಿರತೆ ಯನ್ನು ರಕ್ಷಿಸಲಾಯಿತು.
ಆರೋಗ್ಯಕರವಾಗಿದ್ದ ಚಿರತೆಯನ್ನು ಬಳಿಕ ಸುರಕ್ಷಿತವಾಗಿ ಅರಣ್ಯದಲ್ಲಿ ಬಿಡ ಲಾಯಿತು. ಈ ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕರುಗಳಾದ ಸುರೇಶ್, ಜಾಯ್, ರಮೇಶ್, ವಿತೇಶ್ ಮೊದಲಾದವರು ಪಾಲ್ಗೊಂಡಿದ್ದರು.
ಸ್ಥಳೀಯರಾದ ಸೂರ್ಯನಾರಾಯಣ ಗಾಣಿಗ ಗೋಪಾಲ್ ಪೂಜಾರಿ ಸ್ಟೀವನ್ ಮಂಜುನಾಥ ಭಂಡಾರಿ ಶ್ರೀನಿವಾಸ್ ಪೂಜಾರಿ ಶರತ್ ಭಂಡಾರಿ ಮತ್ತು ಸ್ಥಳೀಯ ಯುವಕರು ಗ್ರಾಮಸ್ಥರು ಉಪಸ್ಥಿತರಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka




























