ಲಾಯರ್ ಜಗದೀಶ್ ಮೇಲೆ ನಡು ರಸ್ತೆಯಲ್ಲೇ ಹಲ್ಲೆ: ಅಷ್ಟಕ್ಕೂ ಆಗಿದ್ದೇನು? - Mahanayaka

ಲಾಯರ್ ಜಗದೀಶ್ ಮೇಲೆ ನಡು ರಸ್ತೆಯಲ್ಲೇ ಹಲ್ಲೆ: ಅಷ್ಟಕ್ಕೂ ಆಗಿದ್ದೇನು?

jagadish
23/01/2025

ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಯಾಗಿದ್ದ ಲಾಯರ್ ಜಗದೀಶ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ನಡು ರಸ್ತೆಯಲ್ಲೇ ಜಗದೀಶ್ ಮೇಲೆ ಯುವಕರ ತಂಡ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋ ಬಗ್ಗೆ ವಿಡಿಯೋ ಮಾಡಿ ಸ್ಪಷ್ಟನೆ ನೀಡಿರುವ ಲಾಯರ್ ಜಗದೀಶ್,  ನಮ್ಮ ಮನೆ ರಸ್ತೆ ಬಳಿ ರೋಡ್ ಬ್ಲಾಕ್ ಮಾಡಿ ಅಣ್ಣಮ್ಮನನ್ನು ಕೂರಿಸಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ 40ಕ್ಕೂ ಹೆಚ್ಚು ಪುಂಡರು ನನ್ನ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ನನ್ನ ಗನ್ ಮ್ಯಾನ್ ಮನೆಯಲ್ಲಿದ್ದಾರೆ. ಬೆಳಗ್ಗೆ ಎಬ್ಬಿಸುವುದು ಬೇಡ ಎಂದು ನಾನು ವಾಕಿಂಗ್ ಗೆ ಬಂದಾಗ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಅಣ್ಣಮ್ಮನನ್ನು ರಸ್ತೆಯಿಂದ ತೆರವು ಮಾಡಲು ನಾನು ಪೊಲೀಸರಿಗೆ ದೂರು ಕೊಟ್ಟಿದ್ದೆ, ಕೊಡಿಗೆಹಳ್ಳಿ ಪೊಲೀಸರು ಆ ರೌಡಿಗಳಿಂದ ಹಣ ಪಡೆದು ಪರ್ಮಿಷನ್ ಕೊಟ್ಟಿದ್ದಾರೆ. 40 ಜನ ರೌಡಿಗಳನ್ನು ಪೊಲೀಸರೇ ಕಳುಹಿಸಿದ್ದಾರೆ ಎನ್ನುವ ಅನುಮಾನ ಇದೆ ಎಂದು ಜಗದೀಶ್ ಆರೋಪಿಸಿದ್ದಾರೆ.

ಖಾಲಿ ಜಾಗದಲ್ಲಿ ಅಣ್ಣಮ್ಮನನ್ನು ಕೂರಿಸುವುದು ಬಿಟ್ಟು, ರಸ್ತೆಯಲ್ಲಿ ಕೂರಿಸಿ ರೋಡ್ ಬ್ಲಾಕ್ ಮಾಡುವುದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಅಟ್ಯಾಕ್ ಮಾಡಿದ್ದಾರೆ ಎಂದು ಜಗದೀಶ್  ಆರೋಪಿಸಿದ್ದಾರೆ.

 



ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ