ಈ ವಾರ ಮಹಾನಾಯಕ ಪ್ರಸಾರವಾಗುತ್ತಾ, ಇಲ್ವಾ? | ವೀಕ್ಷಕರ ಪ್ರಶ್ನೆಗೆ ಇಲ್ಲಿದೆ ಉತ್ತರ - Mahanayaka

ಈ ವಾರ ಮಹಾನಾಯಕ ಪ್ರಸಾರವಾಗುತ್ತಾ, ಇಲ್ವಾ? | ವೀಕ್ಷಕರ ಪ್ರಶ್ನೆಗೆ ಇಲ್ಲಿದೆ ಉತ್ತರ

29/10/2020

ಕರ್ನಾಟಕ ಸೇರಿದಂತೆ ಇಡೀ ಭಾರತವೇ ಮೆಚ್ಚಿದ ಧಾರಾವಾಹಿ “ಮಹಾನಾಯಕ” ಜೀ ಕನ್ನಡ ಕುಟುಂಬ ಅವಾರ್ಡ್ ಪಡೆದುಕೊಂಡಿದೆ. ಇದೇ ಈ ಕಾರ್ಯಕ್ರಮ ಕ್ರಮದ ಪ್ರಸಾರವು ಶನಿವಾರ ಆಗಲಿದೆ. ಈ ನಡುವೆ ಮಹಾನಾಯಕ ಧಾರಾವಾಹಿ ಕೂಡ ಶನಿವಾರ ಮತ್ತು ಭಾನುವಾರ ಪ್ರಸಾರವಾಗುತ್ತಿದೆ. ಜೀ ಕನ್ನಡ ಕುಟುಂಬ ಅವಾರ್ಡ್ ಕಾರ್ಯಕ್ರಮ ಇರುವ ಕಾರಣ ಶನಿವಾರದಂದು ಮಹಾನಾಯಕ ಧಾರಾವಾಹಿ ಪ್ರಸಾರವಾಗುವುದಿಲ್ಲ.


ಶನಿವಾರ ಮಹಾನಾಯಕ ಧಾರಾವಾಹಿ ಪ್ರಸಾರವಾಗದಿದ್ದರೂ ವೀಕ್ಷಕರು  ಆತಂಕ ಪಡಬೇಕಿಲ್ಲ. ಭಾನುವಾರ ಸಂಜೆ 6ರಿಂದ 7ರ ತನಕ ಮಹಾನಾಯಕ ಧಾರಾವಾಹಿ ಪ್ರಸಾರವಾಗಲಿದೆ. ಮುಂದಿನ ವಾರಗಳಿಂದ ಎಂದಿನಂತೆಯೇ ಮಹಾನಾಯಕ ಪ್ರಸಾರವಾಗಲಿದೆ.


ಜೀ ಕುಟುಂಬ ಅವಾರ್ಡ್ ನಲ್ಲಿ ಮಹಾನಾಯಕನಿಗೆ ಪ್ರಶಸ್ತಿಯ ಗರಿ ಸಿಗುವುದನ್ನು ನೋಡಲು ವೀಕ್ಷಕರು ಕಾತರಿಂದ ಕಾಯುತ್ತಿದ್ದಾರೆ. ಮಹಾನಾಯಕ ಡಬ್ಬಿಂಗ್ ಕಲಾವಿದರಿಗೂ ಪ್ರಶಸ್ತಿ ದೊರೆಯಲಿದೆ. ಮಹಾನಾಯಕ ಧಾರಾವಾಹಿ ಇಷ್ಟೊಂದು ಯಶಸ್ವಿಯಾಗಿ ಮೂಡಿ ಬರಲು, ಡಬ್ಬಿಂಗ್ ಕಲಾವಿದರ ಕೊಡುಗೆ ಹೆಚ್ಚು ಮಹತ್ವದ್ದಾಗಿದೆ. ಹೀಗಾಗಿ ಇಡೀ ಮಹಾನಾಯಕ ತಂಡಕ್ಕೆ ವೀಕ್ಷಕರು ಅಭಿನಂದನೆಗಳನ್ನು ಸಲ್ಲಿಸಬೇಕಾಗಿದೆ.


ಇತ್ತೀಚಿನ ಸುದ್ದಿ