ಮಂಗಳೂರು: ರೌಡಿಶೀಟರ್ ನ ಬರ್ಬರ ಹತ್ಯೆ - Mahanayaka
11:57 AM Wednesday 6 - December 2023

ಮಂಗಳೂರು: ರೌಡಿಶೀಟರ್ ನ ಬರ್ಬರ ಹತ್ಯೆ

26/11/2020

ಮಂಗಳೂರು: ರೌಡಿ ಶೀಟರ್ ಓರ್ವನನ್ನು ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕುದ್ರೋಳಿ ಬಳಿಯ ಕರ್ನಲ್‌ ಗಾರ್ಡನ್ ನಡೆದಿದ್ದು,  ಬುಧವಾರ ತಡರಾತ್ರಿ ಅಥವಾ ಬೆಳಗ್ಗಿನ ಜಾವ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಆಗಿದ್ದ ನಿವಾಸಿ ಇಂದ್ರಜಿತ್ (45) ಹತ್ಯೆಗೊಳಗಾಗಿರುವ ವ್ಯಕ್ತಿಯಾಗಿದ್ದಾನೆ. ಇಂದ್ರಜಿತ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಗಾರ್ಡನ್ ಬಳಿಯಲ್ಲಿ ಮೃತದೇಹವನ್ನು ಎಸೆಯಲಾಗಿದೆ ಎಂದು ಹೇಳಲಾಗಿದೆ.

ಬೆಳಗ್ಗೆ ಸುಮಾರು 6 ಗಂಟೆಗೆ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಬರ್ಕೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇತ್ತೀಚಿನ ಸುದ್ದಿ