ಕೊರೊನಾ ನಡುವೆ “ಪೊಗರು” ಚಿತ್ರ ಬಿಡುಗಡೆಗೆ ಸಿದ್ಧ - Mahanayaka

ಕೊರೊನಾ ನಡುವೆ “ಪೊಗರು” ಚಿತ್ರ ಬಿಡುಗಡೆಗೆ ಸಿದ್ಧ

26/11/2020

ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸಿರುವ “ಪೊಗರು” ಚಿತ್ರ ಡಿಸೆಂಬರ್ 25 ಅಥವಾ ಜನವರಿ  1ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಕೊವಿಡ್ 19 ಹಿನ್ನೆಲೆಯಲ್ಲಿ ಕೊವಿಡ್ ನಿಯಮಗಳ ಪ್ರಕಾರ ಶೇ.50ರಷ್ಟು ಮಾತ್ರವೇ ಜನರು ಬರಬೇಕು ಎಂಬ ನಿಯಮವಿದೆ ಈ ಹಿನ್ನೆಲೆಯಲ್ಲಿ ಚಿತ್ರತಂಡ ಎರಡು ದಿನಾಂಕಗಳನ್ನು ನೀಡಿದೆ.


Provided by

ಸದ್ಯ ಶೇ.50ರಷ್ಟು ಮಾತ್ರವೇ ಜನರು ಸಿನಿಮಾ ನೋಡಬಹುದು ಎನ್ನುವ ನಿಯಮ ಹಾಕಲಾಗಿದೆ. ಒಂದು ವೇಳೆ ಡಿಸೆಂಬರ್ 25ರವರೆಗೆ ಕೂಡ ಈ ನಿಯಮ ಮುಂದುವರೆದರೆ, ಪೊಗರು ಚಿತ್ರ ಜನವರಿ 1ರಂದು ಬಿಡುಗಡೆಗೊಳ್ಳಲಿದೆ ಎಂದು ಹೇಳಲಾಗಿದೆ.

ಕೊರೊನಾ ಮಾರ್ಗ ಸೂಚಿಗಳ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆ ಮಾಡಿದರೆ, ತೀವ್ರ ನಷ್ಟವಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ನಿರ್ಮಾಪಕರು ಚಿತ್ರ ಬಿಡುಗಡೆಗೆ ಹಿಂದೆ ಮುಂದೆ ನೋಡುತ್ತಿದ್ದಾರೆ. ಈ ನಡುವೆ ಬಹುನಿರೀಕ್ಷಿತ ಪೊಗರು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.


Provided by

ಇತ್ತೀಚಿನ ಸುದ್ದಿ