ಮದರಸದ ವಿದ್ಯಾರ್ಥಿನಿಯನ್ನು ಎತ್ತಿ ನೆಲಕ್ಕೆ ಬಡಿದ ಯುವಕ! - Mahanayaka

ಮದರಸದ ವಿದ್ಯಾರ್ಥಿನಿಯನ್ನು ಎತ್ತಿ ನೆಲಕ್ಕೆ ಬಡಿದ ಯುವಕ!

udyavara
17/11/2022


Provided by

ಮದರಸದ ವಿದ್ಯಾರ್ಥಿನಿಯನ್ನು ಎತ್ತಿ ಯುವಕನೋರ್ವ ರಸ್ತೆಗೆ ಎಸೆಯುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಂಡು ಬಂದ ವಿದ್ಯಾರ್ಥಿನಿಯನ್ನು ಫಾತಿಮಾ ಎಂದು ಗುರುತಿಸಲಾಗಿದೆ.

ಇನ್ನು ಘಟನೆಯಲ್ಲಿ ಬಾಲಕಿಗೆ ಗಾಯವಾಗಿದ್ದು, ಮಂಗಳೂರಿನ‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಉದ್ಯಾವರದ ಸಿದ್ದೀಕ್‌ ಎಂಬಾತ ಬಾಲಕಿಯನ್ನು ಎತ್ತಿ ಎಸೆದಾತ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಬಂಧಿಸಿದ್ದಾರೆ.

ಯುವಕ ಮಾದಕ ವ್ಯಸನದ ಅಮಲಿನಿಂದ ಈತ ಬಾಲಕಿಯನ್ನು ಎತ್ತಿ ಎಸೆದಿರುವ ಸಂಶಯ ವ್ಯಕ್ತವಾಗಿದೆ. ಇಂದು ಘಟನೆ ನಡೆದಿದ್ದು,ಮದರಸ ಅವರಣದ ಹೊರಗೆ ನಿಂತು‌ ಈತ ಕಾದು ಕುಳಿತಿದ್ದ ಎನ್ನಲಾಗಿದೆ.‌ ಇದೀಗ ಘಟನೆಯ ವಿಡಿಯೋ ಭಾರೀ ವೈರಲ್ ಆಗಿದೆ.

ಆರೋಪಿ ವಿರುದ್ಧ ಕ್ರಮಕ್ಕೆ ಬಾಲಕಿಯ ಪೋಷಕರು‌ ಆಗ್ರಹಿಸಿದ್ದಾರೆ. ವಿದ್ಯಾರ್ಥಿನಿಯನ್ನು ಆ ರೀತಿ ಅಮಾನುಷವಾಗಿ ನೆಲಕ್ಕೆ ಎಸೆದಿದ್ದು ಯಾಕೆ ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದ್ದು ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರಲಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ