ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ಪೊಲೀಸರು ಪತ್ತೆ ಹಚ್ಚಿದ 10 ಅಂಶಗಳು
6 ತಿಂಗಳ ಹಿಂದೆ ಬರ್ಬರವಾಗಿ ಹತ್ಯೆಗೀಡಾಗಿದ್ದ ಶ್ರದ್ಧಾ ವಾಕರ್ ಪ್ರಕರಣದಲ್ಲಿ ಪೊಲೀಸರು 10 ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.
ಮೇ 18ರಂದು ಶ್ರದ್ಧಾಳ ಜೊತೆಗೆ ಜಗಳ ಮಾಡಿದ್ದ ಅಫ್ತಾಬ್ ಅಮೀನ್ ಪೂನಾವಾಲಾ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಸೋಮವಾರ ಒಪ್ಪಿಕೊಂಡಿದ್ದಾನೆ. ಮರುದಿನ ಹೊಸ ಪ್ರೀಜರ್ ಮತ್ತು ಚಾಕು ಖರೀದಿಸಿ ದೇಹವನ್ನು ಕತ್ತರಿಸಿ ಫ್ರೀಜರ್ ನಲ್ಲಿಟ್ಟಿದ್ದಾನೆ. ಬಳಿಕ ರಾತ್ರಿ ವೇಳೆ ದೇಹದ ಭಾಗಗಳನ್ನು ಹೊರ ತೆಗೆದು ಸಮೀಪದ ಅರಣ್ಯ ಪ್ರದೇಶಗಳಲ್ಲಿ ವಿಲೇವಾರಿ ಮಾಡಿದ್ದ ಎಂದು ಒಪ್ಪಿಕೊಂಡಿದ್ದಾನೆ.
ಪೊಲೀಸರ ತನಿಖೆಯಲ್ಲಿ ಪತ್ತೆಯಾದ 10 ಅಂಶಗಳು:
- ಕಾಡಿನಲ್ಲಿ ಒಟ್ಟು 10—13 ಮೂಳೆಗಳು ಪತ್ತೆಯಾಗಿವೆ. ಶ್ರದ್ಧಾಳನ್ನು ಕೊಂದ ಬಳಿಕ ಆಕೆಯನ್ನು 35 ತುಂಡು ಮಾಡಿ ವಿಲೇವಾರಿ ಮಾಡಿರುವುದಾಗಿ ಅಫ್ತಾಬ್ ಹೇಳಿದ್ದಾನೆ. ಆದರೆ ತಲೆ ಬುರುಡೆ ಇನ್ನೂ ಪತ್ತೆಯಾಗಿಲ್ಲ.
- ಪತ್ತೆಯಾಗಿರುವ ಮೂಳೆ ಶ್ರದ್ಧಾಳದ್ದಾ ಅಥವಾ ಯಾವುದಾದರೂ ಪ್ರಾಣಿಯದ್ದೇ ಎನ್ನುವುದನ್ನು ಖಾತರಿ ಪಡಿಸಿಕೊಳ್ಳಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
- ಅಫ್ತಾಬ್ ವಾಸಿಸುತ್ತಿದ್ದ ಛತ್ತರ್ ಪುರ್ ಫ್ಲಾಟ್ ನ ಕಿಚನ್ ನಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಇದರ ಮಾದರಿಗಳನ್ನು ಪ್ರಯೋಗಾಲಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ.
- ರಕ್ತದ ಮಾದರಿ ಮತ್ತು ದೇಹದ ಭಾಗಗಳಿಗೆ ಡಿಎನ್ ಎ ಹೊಂದಾಣಿಕೆಯಾಗುತ್ತಿದೆಯೇ ಎಂದು ಪರೀಕ್ಷಿಸಲು ಶ್ರದ್ಧಾಳ ತಂದೆಯ ಡಿಎನ್ ಎ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ.
- ಅಫ್ತಾಬ್ ನ ಫ್ಲಾಟ್ ನಲ್ಲಿ ಶ್ರದ್ಧಾಳ ಹತ್ಯೆಯಾದ ಬಳಿಕ ಅಪಾರ ಪ್ರಮಾಣದ ನೀರು ಬಳಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ರಕ್ತದ ಕಲೆ ತೊಳೆಯಲು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಳಸಲಾಗಿದೆ ಎಂದು ಹೇಳಲಾಗಿದೆ.
- ತನಿಖಾಧಿಕಾರಿಗಳು ಈ ಪ್ರದೇಶದ ಸಿಸಿ ಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದಾರೆ. ಆದರೆ, ಇಲ್ಲಿರುವ ಸಿಸಿ ಕ್ಯಾಮರಾಗಳು ಕೇವಲ 15 ದಿನಗಳ ದಾಖಲೆಗಳನ್ನು ಸೆರೆಹಿಡಿಯುವ ಸಾಮರ್ಥ್ಯದ್ದಾಗಿದೆ. ಆದರೆ ಪೊಲೀಸರಿಗೆ ಕಳೆದ 6 ತಿಂಗಳುಗಳ ದೃಶ್ಯ ಬೇಕಾಗಿದೆ. ಹೀಗಾಗಿ ದಾಖಲೆಗಳನ್ನು ಪಡೆಯುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿ ಪರಿಣಮಿಸಿದೆ.
- ಶ್ರದ್ಧಾಳ ಬ್ಯಾಗ್ ಪತ್ತೆಯಾಗಿದೆ. ಆದರೆ ಆ ಬ್ಯಾಗ್ ಆಕೆಯದ್ದೇ? ಎನ್ನುವುದನ್ನು ಕುಟುಂಬಸ್ಥರು ಇನ್ನಷ್ಟೇ ಗುರುತಿಸಬೇಕಿದೆ.
- ದೆಹಲಿ ಪೊಲೀಸರು ಅಫ್ತಾಬ್ ನ ಮಂಪರು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಾರೆ. ಆರೋಪಿ ಸತ್ಯ ಹೇಳುತ್ತಿದ್ದಾನೆಯೇ ಅಥವಾ ಪೊಲೀಸರ ತನಿಖೆಯನ್ನು ದಾರಿ ತಪ್ಪಿಸುತ್ತಿದ್ದಾನೆಯೇ ಎನ್ನುವುದನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.
- ಚಾಕುವಿನಿಂದ ಗಾಯಗೊಂಡಿದ್ದ ಅಫ್ತಾಬ್ ಮೇ ತಿಂಗಳಿನಲ್ಲಿ ವೈದ್ಯರಿಂದ ಚಿಕಿತ್ಸೆ ಪಡೆದಿದ್ದ. ಗಾಯ ಹೇಗಾಯ್ತು ಎಂದು ಪ್ರಶ್ನಿದಾಗ ಅಫ್ತಾಬ್ ಚಡಪಡಿಸಿದ್ದ ನಂತರ ಹಣ್ಣು ಕತ್ತರಿಸುವ ವೇಳೆ ಗಾಯವಾಗಿತ್ತು ಎಂದು ಹೇಳಿದ್ದ. ಆತನಿಗೆ ಯಾವುದೇ ಆಳವಾದ ಗಾಯಗಳಾಗಿರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
- ಶ್ರದ್ಧಾಳನ್ನು ಕೊಂದ ಬಳಿಕ ಆಕೆಯ ಬ್ಯಾಂಕ್ ಖಾತೆಯ ಆ್ಯಪ್ ನ್ನು ಬಳಸಿ ಆಕೆಯ ಖಾತೆಯಿಂದ ತನ್ನ ಖಾತೆಗೆ 54 ಸಾವಿರ ರೂಪಾಯಿ ವರ್ಗಾವಣೆ ಮಾಡಿಕೊಂಡಿದ್ದ.
ಏನೆಲ್ಲ ನಾಪತ್ತೆಯಾಗಿದೆ?
ಶ್ರದ್ಧಾಳ ತಲೆಬುರುಡೆ, ಮೊಬೈಲ್ ಫೋನ್, ಶ್ರದ್ಧಾ ಮತ್ತು ಅಫ್ತಾಬ್ ಮೇ 18ರಂದು ಧರಿಸಿದ್ದ ಬಟ್ಟೆ ಇನ್ನೂ ಪತ್ತೆಯಾಗಿಲ್ಲ. ಬಟ್ಟೆಗಳನ್ನು ಅಫ್ತಾಬ್, ಚಲಿಸುತ್ತಿದ್ದ ಕಸದ ವಾಹನಕ್ಕೆ ಎಸೆದಿದ್ದಾನೆ ಎನ್ನಲಾಗಿದೆ.
ಮೇ 18ಕ್ಕಿಂತ ಮೊದಲೇ ಶ್ರದ್ಧಾಳನ್ನು ಕೊಲ್ಲಲು ಮುಂದಾಗಿದ್ದ:
ಶ್ರದ್ಧಾ ಮದುವೆ ಮಾಡಿಕೊಳ್ಳುವಂತೆ ಒತ್ತಡ ಹಾಕುತ್ತಿದ್ದಳು. ಮೇ 18ಕ್ಕೂ ಮೊದಲೇ ಜಗಳದ ಸಮಯದಲ್ಲಿ ಶ್ರದ್ಧಾಳನ್ನು ಕೊಲ್ಲಲು ಅಫ್ತಾಬ್ ಮುಂದಾಗಿದ್ದ. ಆದರೆ, ಜಗಳದ ಸಮಯದಲ್ಲಿ ಶ್ರದ್ಧಾ ತುಂಬಾನೇ ಭಾವುಕಳಾಗಿದ್ದರಿಂದಾಗಿ ಕೊಲ್ಲಲು ಸಾಧ್ಯವಾಗಲಿಲ್ಲ ಎಂದು ಅಫ್ತಾಬ್ ಬಾಯ್ಬಿಟ್ಟಿದ್ದಾನೆ. ಮೇ 18ಕ್ಕೂ ಮೊದಲು ಮನೆಗೆ ಗೃಹೋಪಯೋಗಿ ವಸ್ತುಗಳನ್ನು ತರುವ ವಿಚಾರದಲ್ಲಿ ಜಗಳವಾಗಿತ್ತು ಎಂದು ಆತ ಹೇಳಿಕೊಂಡಿದ್ದಾನೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka