ಪ್ರಧಾನಿ ಮೋದಿ ಹೇಳಿದರೂ ಸೇತುವೆ ಭಾಗ್ಯ ಸಿಗಲಿಲ್ಲ: ಕಾದು ಬೇಸತ್ತು ಹೋದ ಗ್ರಾಮಸ್ಥರೇ ಸೇತುವೆ ನಿರ್ಮಿಸಿದರು! - Mahanayaka

ಪ್ರಧಾನಿ ಮೋದಿ ಹೇಳಿದರೂ ಸೇತುವೆ ಭಾಗ್ಯ ಸಿಗಲಿಲ್ಲ: ಕಾದು ಬೇಸತ್ತು ಹೋದ ಗ್ರಾಮಸ್ಥರೇ ಸೇತುವೆ ನಿರ್ಮಿಸಿದರು!

guttigaru
26/06/2021

ಸುಳ್ಯ:  ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗ್ರಾಮದ ಮೊಗ್ರ ಎಂಬ ಊರಿನಲ್ಲಿ ಹೊಳೆ ದಾಟಲು ಜನರು ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದರು. ಈ ಬಗ್ಗೆ ಸ್ಥಳೀಯಾಡಳಿತ ಊರಿನ ಬೇಡಿಕೆಯನ್ನು ನಿರ್ಲಕ್ಷಿಸಿದಾಗ  ಗ್ರಾಮಸ್ಥರು, ಸಚಿವ-ಶಾಸಕರ ಮೊರೆ ಹೋದರೂ ಬೇಡಿಕೆ ಈಡೇರದಿದ್ದಾಗ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು.

ಪ್ರಧಾನಿಗೆ ಪತ್ರ ಬರೆದ ಬಳಿಕ ಈ ಸಮಸ್ಯೆಯನ್ನು ಬಗೆಹರಿಸುವಂತೆ ಅವರ ಕಾರ್ಯಾಲಯದಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಗೆ  ಸೂಚನೆ ಬಂದಿತ್ತು. ಆದರೆ, ಪ್ರಧಾನಿಯ ಆದೇಶ ಮಾತ್ರ ಬಂತೇ ಹೊರತು ಸೇತುವೆ ಗ್ರಾಮಕ್ಕೆ ಬರಲಿಲ್ಲ.

ಪಂಚಾಯತ್, ಶಾಸಕರು, ಸಚಿವರು, ಸಂಸದರು, ಕೊನೆಗೆ ಮೋದಿಯಿಂದಲೂ ಈ ಸಮಸ್ಯೆ ಇನ್ನು ಬಗೆ ಹರಿಯುವುದಿಲ್ಲ ಎಂದು ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ತಮ್ಮ ಸ್ವಂತ ಖರ್ಚಿನಿಂದಲೇ ಹೊಳಗೆ ತಾತ್ಕಾಲಿಕ ಕಬ್ಬಿಣದ ಸೇತುವೆಯನ್ನು ನಿರ್ಮಿಸಿದ್ದಾರೆ. ಇದಕ್ಕಾಗಿ 1 ಲಕ್ಷ ರೂಪಾಯಿಯನ್ನು ವಿನಿಯೋಗಿಸಿದ್ದಾರೆ.

ಮಳೆಗಾಲದಲ್ಲಿ ಹೊಳೆ ದಾಟಲು  ಈ ಗ್ರಾಮದ ಮಕ್ಕಳು, ವೃದ್ಧರು, ಮಹಿಳೆಯರು ತೀವ್ರ ಕಷ್ಟಪಡುವಂತಾಗಿತ್ತು. ಈ ಕ್ಷೇತ್ರ ಸಚಿವ ಅಂಗಾರ ಅವರದ್ದಾಗಿದೆ. ಜನಪ್ರತಿನಿಧಿಗಳಿಗೆ ಕಣ್ಣು, ಕಿವಿ ಯಾವುದೂ ಇಲ್ಲ ಎನ್ನುವುದು ಅರಿವಾಗುತ್ತಿದ್ದಂತೆಯೇ ಗ್ರಾಮಸ್ಥರು, ನಮ್ಮ ಸಮಸ್ಯೆಯನ್ನು ನಾವೇ ಬಗೆ ಹರಿಸಿಕೊಳ್ಳುತ್ತೇವೆ ಎಂದು ಈ ಕೆಲಸ ಮಾಡಿದ್ದಾರೆ. ಇಲ್ಲಿನ ಜನಪ್ರತಿನಿಧಿಗಳಿಗೆ ನಿಜವಾಗಿಯೂ ನೈತಿಕತೆ ಇದ್ದರೆ, ಈ ಗ್ರಾಮಕ್ಕೆ ಇನ್ನಾದರೂ ಸುಸಜ್ಜಿತವಾದ ಸೇತುವೆಯನ್ನು ನಿರ್ಮಿಸಲು ಮುಂದಾಗಬೇಕಿದೆ. ಕೇವಲ ಈ ಗ್ರಾಮ ಮಾತ್ರವಲ್ಲ ಬಹಳಷ್ಟು ಗ್ರಾಮಗಳ ಸ್ಥಿತಿ ಇದೇ ಆಗಿದೆ.

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ