ಆನ್ ಲೈನ್ ಕ್ಲಾಸ್ ನಲ್ಲಿ ಶಿಕ್ಷಕರ ಪ್ರಶ್ನೆಗೆ ಉತ್ತರಿಸದ ಮಗುವಿಗೆ ಪೆನ್ಸಿಲ್ ನಿಂದ ಚುಚ್ಚಿದ ತಾಯಿ! - Mahanayaka

ಆನ್ ಲೈನ್ ಕ್ಲಾಸ್ ನಲ್ಲಿ ಶಿಕ್ಷಕರ ಪ್ರಶ್ನೆಗೆ ಉತ್ತರಿಸದ ಮಗುವಿಗೆ ಪೆನ್ಸಿಲ್ ನಿಂದ ಚುಚ್ಚಿದ ತಾಯಿ!

24/10/2020

ಮುಂಬೈ: ಆನ್ ಲೈಕ್ ಕ್ಲಾಸ್ ನಲ್ಲಿ ಶಿಕ್ಷಕರ ಪ್ರಶ್ನೆಗೆ ಮಗು ಉತ್ತರಿಸಿಲ್ಲ ಎಂಬ ಕಾರಣಕ್ಕೆ ತಾಯಿಯೊಬ್ಬಳು ತನ್ನ 12 ವರ್ಷದ ಮಗಳಿಗೆ ಪೆನ್ಸಿಲ್ ನಿಂದ ಚುಚ್ಚಿ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಘಟನೆ ಸಂಬಂಧ ಸ್ಯಾಂಟ್‌ಕ್ರೂಜ್ ಪೊಲೀಸ್ ಠಾಣೆ ಮಹಿಳೆಯ ವಿರುದ್ಧ ದೂರು ದಾಖಲಿಸಿದೆ. ಆನ್ ಲೈನ್ ತರಗತಿಯ ಸಂದರ್ಭದಲ್ಲಿ ತನ್ನ 6ನೇ ತರಗತಿಯ 12 ವರ್ಷದ ಮಗಳು ಶಿಕ್ಷಕರ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ ಎಂಬ ಕಾರಣಕ್ಕೆ ತಾಯಿಯು ಮಗಳ ಬೆನ್ನಿಗೆ ಪೆನ್ಸಿಲ್ ನಿಂದ ಚುಚ್ಚಿದ್ದು, ಬಳಿಕ ಅನೇಕ ಬಾರಿ ಕಚ್ಚಿದ್ದಾಳೆ ಎಂದು ಬಾಲಕಿಯ ಸಹೋದರಿ ಹೇಳಿದ್ದಾಳೆ.

ತಾಯಿಯ ಕೃತ್ಯದ ಬಳಿಕ ಬಾಲಕಿಯ ಸಹೋದರಿ ಮಕ್ಕಳ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಿದ್ದಾಳೆ. ಈ ಸಂದರ್ಭ ಅಧಿಕಾರಿಗಳು ಮನೆಗೆ ಬಂದಿದ್ದು, ಆಗ ಅಧಿಕಾರಿಗಳ ಜೊತೆಗೂ ತಾಯಿ ವಾದ ಮಾಡಲು ಆರಂಭಿಸಿದ್ದಾಳೆ. ಬಳಿಕ ಆಕೆಯ ವಿರುದ್ಧ ದೂರು ನೀಡಲಾಗಿದೆ.

ಇತ್ತೀಚಿನ ಸುದ್ದಿ