ಇತಿಹಾಸದಲ್ಲಿ ಕಂಡು ಕೇಳರಿಯದ ಮಳೆಗೆ ಬೆಚ್ಚಿದ ಮುಳ್ಳಯ್ಯನ ಗಿರಿ! - Mahanayaka
12:21 AM Thursday 12 - December 2024

ಇತಿಹಾಸದಲ್ಲಿ ಕಂಡು ಕೇಳರಿಯದ ಮಳೆಗೆ ಬೆಚ್ಚಿದ ಮುಳ್ಳಯ್ಯನ ಗಿರಿ!

mullaiyana giri
20/10/2024

ಚಿಕ್ಕಮಗಳೂರು :  ಇತಿಹಾಸದಲ್ಲಿ ಕಂಡು ಕೇಳರಿಯದ ಮಳೆಗೆ ಮುಳ್ಳಯ್ಯನ ಗಿರಿ ಬೆಚ್ಚಿದ ಘಟನೆ ನಡೆದಿದೆ.  ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶದಲ್ಲೇ 2 ಅಡಿ ಮಳೆ ನೀರು ಆವರಿಸಿದ್ದು,  ಹಿಂಗಾರು ಮಳೆಗೆ ಪಶ್ಚಿಮಘಟ್ಟಗಳ ತಪ್ಪಲು ಅಲ್ಲೋಲ—ಕಲ್ಲೋಲವಾಗಿದೆ.

ದತ್ತಪೀಠದ ರಸ್ತೆಯಲ್ಲಿ 2 ಅಡಿ ಎತ್ತರದಲ್ಲಿ ಮಳೆ ನೀರು ಹರಿದಿದೆ.  ಎಷ್ಟೇ ಮಳೆ ಬಂದರೂ ಪಶ್ಚಿಮ ಘಟ್ಟಕ್ಕೆ ಲೆಕ್ಕವೇ ಅಲ್ಲ,  ಸಾವಿರಾರು ಅಡಿ ಆಳ, ಮುಗಿಲೆತ್ತರದ ಬೆಟ್ಟಗುಡ್ಡಗಳ ಪಶ್ಚಿಮ ಘಟ್ಟಗಳ ತಪ್ಪಲು.  ಎಷ್ಟೇ ಮಳೆ, ಹೇಗೆ ಸುರಿದರೂ ನೀರು ಹರಿದು ಹೋಗುತ್ತೆ ಆದರೆ, ಹಿಂಗಾರು ಮಳೆ ಅಬ್ಬರಕ್ಕೆ ಅಂತಹಾ ಪಶ್ಚಿಮ ಘಟ್ಟವೇ ಬೆದರಿದೆ.

ಮುಗಿಲೆತ್ತರದ ಬೆಟ್ಟಗಳ ಮೇಲೆ 2 ಅಡಿ ನೀರು, ಮಳೆ ಪ್ರಮಾಣ ಹೇಗಿರಬಹುದು, ಮಳೆರಾಯನ ಅಬ್ಬರಕ್ಕೆ ಪ್ರವಾಸಿಗರು ತೊಯ್ದು ತೊಪ್ಪೆಯಾಗಿದ್ದಾರೆ.  ಮಳೆ ಮಧ್ಯೆ ಸಿಲುಕಿ ಮುಳ್ಳಯ್ಯನಗಿರಿ ಸಹವಾಸವೇ ಬೇಡ ಎಂದಿದ್ದಾರೆ ಪ್ರವಾಸಿಗರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ