ಆನ್ ಲೈನ್ ಜೂಜಿನ ಜಾಹೀರಾತು | ಕಿಚ್ಚ ಸುದೀಪ್- ಪ್ರಕಾಶ್ ರೈ ವಿರುದ್ಧವೂ ನೋಟಿಸ್ ಜಾರಿ - Mahanayaka

ಆನ್ ಲೈನ್ ಜೂಜಿನ ಜಾಹೀರಾತು | ಕಿಚ್ಚ ಸುದೀಪ್- ಪ್ರಕಾಶ್ ರೈ ವಿರುದ್ಧವೂ ನೋಟಿಸ್ ಜಾರಿ

04/11/2020

 ಚೆನ್ನೈ: ಆನ್ ಲೈನ್ ಜೂಜಾಟದ ಜಾಹೀರಾತಿನಲ್ಲಿ  ನಟಿಸಿರುವ ಹಿನ್ನೆಲೆಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಪ್ರಕಾಶ್ ರಾಜ್ ಅವರಿಗೆ ಕೂಡ ಮದ್ರಾಸ್ ಹೈಕೋರ್ಟ್ ನಿಂದ ನೋಟಿಸ್ ಜಾರಿಗೊಳಿಸಲಾಗಿದೆ. 

ಆನ್ ಲೈನ್ ಸ್ಪೋರ್ಟ್ಸ್ ಆಯಪ್ ಜಾಹೀರಾತುಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ಮಾಜಿ ನಾಯಕ ಸೌರವ್ ಗಂಗೂಲಿ, ನಟರಾದ ಪ್ರಕಾಶ್ ರಾಜ್, ತಮ್ಮನಾ ಭಾಟಿಯಾ ಸೇರಿದಂತೆ ಇತರ ರಿಗೂ ಅವರಿಗೆ ಮದ್ರಾಸ್ ಹೈಕೋರ್ಟ್ ನ ಮಧುರೈ ಪೀಠ ನೋಟಿಸ್ ಜಾರಿ ಮಾಡಿದೆ.
ಮೊಹಮ್ಮದ್ ರಿಜ್ವಿ ಎಂಬುವರು ವಕೀಲೆ ನೀಲಮೇಘನ್ ಥುಜಾ ಮೂಲಕ  ಆನ್ ಲೈನ್ ಜೂಜಿನ ಬಗ್ಗೆ ಸಾರ್ವಜನಿಕ ಹಿಸಾಸಕ್ತಿಯ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆನ್ ಲೈನ್ ಜೂಜಿನ ಗೇಮ್ ನ ಜಾಹೀರಾತಿನಲ್ಲಿ ನಟಿಸಿರುವ ಎಲ್ಲರಿಗೂ  ನೋಟಿಸ್ ನೀಡಲಾಗಿದೆ.

 

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ