ಒಂದು ಬಾರಿ ಸಿಗರೇಟ್ ಕೈಯಲ್ಲಿ ಹಿಡಿದರೆ ಮುಗಿದೇ ಹೋಯ್ತು! | ಈ ಸಂಶೋಧನೆ ಹೇಳಿದ ಸತ್ಯ ಓದಿದರೆ ಬೆಚ್ಚಿ ಬೀಳುತ್ತೀರಿ - Mahanayaka

ಒಂದು ಬಾರಿ ಸಿಗರೇಟ್ ಕೈಯಲ್ಲಿ ಹಿಡಿದರೆ ಮುಗಿದೇ ಹೋಯ್ತು! | ಈ ಸಂಶೋಧನೆ ಹೇಳಿದ ಸತ್ಯ ಓದಿದರೆ ಬೆಚ್ಚಿ ಬೀಳುತ್ತೀರಿ

26/12/2020

ಯಾವುದೇ ಚಟವನ್ನಾದರೂ ಸುಲಭವಾಗಿ ಬಿಟ್ಟು ಬಿಡಬಹುದು ಆದ್ರೆ… ಸಿಗರೇಟ್ ಕೈಯಲ್ಲಿ ಒಂದು ಬಾರಿ ಹಿಡಿದು ಸೇದಿದ ಎಂದರೆ ಅದನ್ನು ಬಿಡುವುದು ಅಷ್ಟು ಸುಲಭದ ಕೆಲಸವಲ್ಲ ಎಂದೇ ಸಾಮಾನ್ಯವಾಗಿ ಈ ಚಟಕ್ಕೆ ಬಿದ್ದವರು ಹೇಳುತ್ತಾರೆ.  ಇದನ್ನೇ ಇದೀಗ ಅಧ್ಯಯನವೊಂದು ಕೂಡ ಹೇಳಿದೆ.

ದಿನಕ್ಕೆ ಒಂದೇ ಒಂದು ಸಿಗರೇಟ್ ಸೇದುವವರು ಬಹಳ ಬೇಗನೆ ನಿಕೋಟಿನ್ ಚಟಕ್ಕೆ ಅಂಟಿಕೊಳ್ಳುತ್ತಾರಂತೆ.  ಅಮೆರಿಕದ ಅಧ್ಯಯನವೊಂದು ಈ ಸತ್ಯವನ್ನು ಹೇಳಿದೆ. ಇವರು ಸುಮಾರು 6,700 ಧೂಮಪಾನಿಗಳನ್ನು ಸಂದರ್ಶಿಸಿ ಈ ಬಗ್ಗೆ ಕೇಳಿದ್ದಾರೆ. ಇವರ ಪೈಕಿ ಎಲ್ಲರು ಕೂಡ ದಿನವೊಂದಕ್ಕೆ 1ರಿಂದ 4 ಸಿಗರೇಟ್ ವರೆಗೆ ಸೇದುತ್ತಿದ್ದವರಾಗಿದ್ದಾರೆ. ಆದರೆ ಇದೀಗ ಸಿಗರೇಟ್ ಗೆ ಸಂಪೂರ್ಣವಾಗಿ ದಾಸರಾಗಿ ಬಿಟ್ಟಿದ್ದಾರೆ.

ಸಾಮಾನ್ಯವಾಗಿ ಒಬ್ಬ ವ್ಯಕ್ತಿ 10 ದಿನ ಸಿಗರೇಟ್ ಸೇದಿನೆಂದರೆ, ಮತ್ತೆ ಅದರಿಂದ ಆತ ವಾಪಸ್ ಬರುವುದು ಬಹಳ ಕಷ್ಟಕರವಾಗಿದೆ.  ಕಡಿಮೆ ಸಿಗರೇಟ್ ಸೇದಿದರೆ ಸಮಸ್ಯೆ ಇಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ, ಈ ಕಡಿಮೆ ಸಿಗರೇಟ್ ಸೇದುವುದು ಮುಂದೆ ಹೆಚ್ಚು ಸಿಗರೇಟ್ ಸೇದುವ ಮಟ್ಟಕ್ಕೆ ಬೆಳೆಯಲು ಆರಂಭ ಅಷ್ಟೆ ಎಂದು ಸಂಶೋಧಕರು ಹೇಳುತ್ತಾರೆ.

ಕಡಿಮೆ ಸಿಗರೇಟು ಸೇದುವವರು ಸಿಗರೇಟ್ ನ ಚಟಕ್ಕೆ ಬಲಿಯಾಗುವುದಿಲ್ಲ ಎನ್ನುವುದು ಸುಳ್ಳು. ದಿನ ಬಿಟ್ಟು ದಿನ ಸಿಗರೇಟ್ ಸೇದಿದರೂ ಸಿಗರೇಟ್ ಗೆ ದಾಸರಾಗಿ ಬಿಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ