ವಿದ್ಯಾರ್ಥಿಗಳೆದುರೇ ಫ್ರಾನ್ಸ್ ಅಧ್ಯಕ್ಷನ ಪ್ರತಿಕೃತಿಯ ಶಿರಚ್ಛೇದನ ಮಾಡಿದ ಪಾಕಿಸ್ತಾನಿ ಶಿಕ್ಷಕಿ | ವಿಡಿಯೋ ವೈರಲ್ - Mahanayaka

ವಿದ್ಯಾರ್ಥಿಗಳೆದುರೇ ಫ್ರಾನ್ಸ್ ಅಧ್ಯಕ್ಷನ ಪ್ರತಿಕೃತಿಯ ಶಿರಚ್ಛೇದನ ಮಾಡಿದ ಪಾಕಿಸ್ತಾನಿ ಶಿಕ್ಷಕಿ | ವಿಡಿಯೋ ವೈರಲ್

03/11/2020

ನವದೆಹಲಿ: ವಿದ್ಯಾರ್ಥಿನಿಯರ ಎದುರು ಪಾಕಿಸ್ತಾನದ ಇಸ್ಲಾಮಿಕ್ ಸೆಮಿನರಿಯೊಂದರಲ್ಲಿ ಪಾಕಿಸ್ತಾನದ ಶಿಕ್ಷಕಿಯೊಬ್ಬರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೊನ್ ಅವರ ಪ್ರತಿಕೃತಿಯ ಶಿರಚ್ಛೇದನ ಮಾಡಿದ ವಿಡಿಯೋವೊಂದು ವೈರಲ್ ಆಗಿದೆ.


ದಕ್ಷಿಣ ಫ್ರೆಂಚ್ ನಗರವಾದ ನೈಸ್ ನಲ್ಲಿ ಮಾರಣಾಂತಿಕವಾಗಿ ಚಾಕುವಿನಿಂದ ಇರಿದು ದಾಳಿ ನಡೆಸಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ ಪ್ರವಾದಿಯವರ ವ್ಯಂಗ್ಯ ಚಿತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಈ ಆಕ್ರೋಶವನ್ನು ವ್ಯಕ್ತಪಡಿಸಲಾಗಿದೆ ಎಂದು ಹೇಳಲಾಗಿದೆ. ಪಾಕಿಸ್ತಾನದ ಮಹಿಳಾ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳ ಎದುರೇ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೊನ್ ಅವರ ಪ್ರತಿಕೃತಿಯ ಶಿರಚ್ಛೇದನ ಮಾಡುತ್ತಾರೆ.

https://twitter.com/SAMRIReports/status/1321830427762561024?s=20ಈ ಬಗ್ಗೆ ವರದಿ ಮಾಡಿರುವ ಫ್ರೆಂಚ್ ನಿಯತಕಾಲಿಕ ಹೆಬ್ಡೊ, ಮನುಷ್ಯನ ಶಿರಚ್ಛೇದನ ಮಾಡುವುದು ಹೇಗೆ ಎಂದು ವಿದ್ಯಾರ್ಥಿಗಳಿಗೆ ಕಲಿಸಿಕೊಡಲಾಗುತ್ತಿದೆ ಎಂದು ವಿಡಂಬನಾತ್ಮಕ ಲೇಖನ ಬರೆದಿದೆ. 

ಮಹಾನಾಯಕ ಮಾಧ್ಯಮದ ಎಲ್ಲ ಸುದ್ದಿಗಳಿಗಾಗಿ ನಮ್ಮ ಗ್ರೂಪ್ ಗಳಿಗೆ ಜಾಯಿನ್ ಆಗಿ

https://chat.whatsapp.com/HeAiP3WAQfT6ajtrJVJ4kPಇತ್ತೀಚಿನ ಸುದ್ದಿ