ಪ್ರಧಾನಿಯ ವಾರಣಾಸಿ ಕಚೇರಿ ಒಎಲ್ ಎಕ್ಸ್ ನಲ್ಲಿ ಮಾರಾಟಕ್ಕಿಟ್ಟ ನಾಲ್ವರ ಬಂಧನ - Mahanayaka
8:07 AM Sunday 15 - September 2024

ಪ್ರಧಾನಿಯ ವಾರಣಾಸಿ ಕಚೇರಿ ಒಎಲ್ ಎಕ್ಸ್ ನಲ್ಲಿ ಮಾರಾಟಕ್ಕಿಟ್ಟ ನಾಲ್ವರ ಬಂಧನ

18/12/2020

ವಾರಣಾಸಿ: ಪ್ರದಾನಿ ನರೇಂದ್ರ ಮೋದಿಯವರ  ವಾರಣಾಸಿಯ  ಕಚೇರಿಯನ್ನು ಒಎಲ್ ಎಕ್ಸ್ ನಲ್ಲಿ ಮಾರಾಟಕ್ಕಿಟ್ಟ ಘಟನೆ ನಡೆದಿದ್ದು, ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.

7.5ಕೋಟಿ ರೂ.ಗೆ  ಆರೋಪಿಗಳು ಪ್ರಧಾನಿ ಅವರ ವಾರಣಾಸಿಯಲ್ಲಿರುವ ಕಚೇರಿಯನ್ನು ಒಎಲ್ ಎಕ್ಸ್ ನಲ್ಲಿ ಮಾರಾಟಕಿಟ್ಟಿದ್ದು,  ಮಾರಾಟಕಿಟ್ಟ ಬಳಿಕ ಅದರ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಕಚೇರಿಯು ನಾಲ್ಕು  ಕೊಠಡಿಗಳನ್ನು ಮತ್ತು ನಾಲ್ಕು ಸ್ನಾನದ ಕೊಠಡಿಗಳನ್ನು ಹೊಂದಿದ್ದು6,500 ಚದರಡಿ ಕಾರ್ಪೆಟ್ ಪ್ರದೇಶವನ್ನು ಒಳಗೊಂಡಿದೆ ಎಂದು ಆರೋಪಿಗಳು ಒಎಲ್ ಎಕ್ಸ್ ನಲ್ಲಿ ಹಾಕಿದ ಜಾಹೀರಾತಿನಲ್ಲಿ ವಿವರ ನೀಡಿದ್ದರು.


Provided by

ಈ ಚಿತ್ರ ವ್ಯಾಪಕವಾಗಿ ವೈರಲ್ ಆಗಿದ್ದು, ಈ ವೇಳೆ ಎಚ್ಚೆತ್ತುಕೊಂಡ  ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ  ಒಎಲ್ ಎಕ್ಸ್ ನಲ್ಲಿ ಹಾಕಲಾಗಿದ್ದ ಜಾಹೀರಾತನ್ನು ಡಿಲೀಟ್ ಮಾಡಲಾಗಿದೆ. ಇನ್ನೂ ಒಎಲ್ಎಕ್ಸ್ನಲ್ಲಿ ಜಾಹೀರಾತು ನೀಡಿದವರಲ್ಲಿ ಓರ್ವ ಲಕ್ಷ್ಮೀಕಾಂತ್ ಓಜಾ ಕಟ್ಟಡದ ಫೋಟೊವನ್ನು ನೀಡಿದ್ದ ಎನ್ನಲಾಗಿದೆ.

ಇತ್ತೀಚಿನ ಸುದ್ದಿ