ಪ್ರತಿಭಟನಾಕಾರರು ದಹಿಸಲು ತಂದಿದ್ದ ಕಂಗನಾ ರಣಾವತ್ ಅವರ ಪ್ರತಿಕೃತಿಯನ್ನು ಕಸಿದುಕೊಂಡು ಓಡಿದ ಪೊಲೀಸ್ ಅಧಿಕಾರಿ
ಉತ್ತರ ಪ್ರದೇಶದ ಲಖನೌದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ನಾಟಕೀಯ ಬೆಳವಣಿಗೆಯೊಂದು ನಡೆದಿದೆ. ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಅವರ ಪೂತ್ಥಳಿಯನ್ನು (ಬೊಂಬೆ) ದಹಿಸಲು ಸಜ್ಜಾಗಿದ್ದಾಗ, ಉತ್ತರ ಪ್ರದೇಶದ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ದಿಢೀರನೆ ಪುತ್ಥಳಿಯನ್ನು ಕಸಿದುಕೊಂಡು ಓಡಿಹೋಗಿರುವ ಘಟನೆ ವರದಿಯಾಗಿದೆ.
ನೀಟ್–ಯುಜಿ (NEET–UG) ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿನಿಯರ ಬಗ್ಗೆ ಕಂಗನಾ ರಣಾವತ್ ನೀಡಿದ್ದರೆನ್ನಲಾದ “ಜನರೇಷನ್ ಗಟರ್” (Generation Gutter) ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಮಹಿಳಾ ವಿಭಾಗವು ಲಖನೌದಲ್ಲಿ ಧರಣಿ ನಡೆಸಿತ್ತು.
ಕಾಂಗ್ರೆಸ್ ಕಾರ್ಯಕರ್ತರು ಕಂಗನಾ ಅವರ ಪುತ್ಥಳಿಗೆ ಬೆಂಕಿ ಹಚ್ಚಲು ಸಿದ್ಧತೆ ನಡೆಸುತ್ತಿದ್ದಂತೆಯೇ ಸ್ಥಳದಲ್ಲಿದ್ದ ಯುಪಿ ಪೊಲೀಸ್ ಇನ್ಸ್ಪೆಕ್ಟರ್ ಪುತ್ಥಳಿಯನ್ನು ಕಸಿದುಕೊಂಡು ಕಾಲ್ಕಿತ್ತಿದ್ದಾರೆ. ಪೊಲೀಸ್ ಅಧಿಕಾರಿ ಪುತ್ಥಳಿಯೊಂದಿಗೆ ಓಡುತ್ತಿದ್ದರೆ, ಅವರ ಹಿಂದೆ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗುತ್ತಾ ಬೆನ್ನಟ್ಟುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Lucknow saw a real-life game of “catch me if you can”. Cop made a dash with Kangana Ranaut’s effigy to stop it being burnt outside the Congress office in Lucknow. A woman Congress protester sprinted after him, trying to snatch it back. pic.twitter.com/johftPof8z
— TOI Lucknow (@TOILucknow) July 29, 2026
ವಿವಾದಕ್ಕೆ ಹಿನ್ನೆಲೆ ಏನು?
ನೀಟ್–ಯುಜಿ ಪರೀಕ್ಷಾ ಅಕ್ರಮದ ವಿರುದ್ಧ ಧ್ವನಿ ಎತ್ತಿದ್ದ ಯುವತಿಯರ ನಡವಳಿಕೆಯನ್ನು ಕಂಗನಾ ರಣಾವತ್ ಟೀಕಿಸಿದ್ದರು. ಆದರೆ, ಈ ಕುರಿತು ನಂತರ ಇನ್ಸ್ಟಾಗ್ರಾಮ್ನಲ್ಲಿ ಸ್ಪಷ್ಟನೆ ನೀಡಿದ್ದ ಕಂಗನಾ, “ನನ್ನ ಹೇಳಿಕೆಯು ನಿರ್ದಿಷ್ಟವಾಗಿ ಅಸಭ್ಯವಾಗಿ ವರ್ತಿಸಿದ ಪ್ರತಿಭಟನಾಕಾರರನ್ನು ಉದ್ದೇಶಿಸಿದ್ದೇ ಹೊರತು, ಒಟ್ಟಾರೆ ಮಹಿಳೆಯರನ್ನಲ್ಲ” ಎಂದು ಸಮರ್ಥಿಸಿಕೊಂಡಿದ್ದಾರೆ.
ಮಹಿಳಾ ಕಾಂಗ್ರೆಸ್ ನಾಯಕಿಯರು ಕಂಗನಾ ಅವರ ಹೇಳಿಕೆಯು ದೇಶದ ಹೆಣ್ಣುಮಕ್ಕಳಿಗೆ ಮಾಡಿದ ಅಪಮಾನ ಎಂದು ಆರೋಪಿಸಿದ್ದು, ಅವರು ಬೆಷರತ್ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























