ಕರ್ತವ್ಯದಲ್ಲಿದ್ದಾಗ ಮಹಿಳೆ ಥಳಿಸಿದರೂ, ತಾಳ್ಮೆಯಿಂದ ವರ್ತಿಸಿದ ಪೊಲೀಸ್ ಕಾನ್ಸ್ ಸ್ಟೇಬಲ್ ಸನ್ಮಾನ
ಮುಂಬೈ: ದ್ವಿಚಕ್ರ ವಾಹನ ತಡೆದದಕ್ಕೆ ಮಹಿಳೆಯೊಬ್ಬರು ಸಂಚಾರಿ ಪೊಲೀಸ್ ಕಾನ್ಸ್ ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ್ದು, ಮಹಿಳೆ ಹಲ್ಲೆ ನಡೆಸಿದರೂ ಪೊಲೀಸ್ ಅಧಿಕಾರಿ ತಾಳ್ಮೆ ವಹಿಸಿದ್ದು, ಅವರ ತಾಳ್ಮೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾದ ಬೆನ್ನಲ್ಲೇ ಅವರಿಗೆ ಸಾರ್ವಜನಿಕರು ಸನ್ಮಾನಿಸಿದ್ದಾರೆ.
ಮೂರು ದಿನಗಳ ಹಿಂದೆ ಮಹಿಳೆಯೊಬ್ಬಳು, ತನ್ನ ದ್ವಿಚಕ್ರ ವಾಹನವನ್ನು ತಡೆದುದಕ್ಕಾಗಿ ಸಂಚಾರಿ ಠಾಣೆ ಕಾನ್ಸ್ಸ್ಟೇಬಲ್ ಶ್ರೀ ಪಾರ್ಥೆ ಎಂಬವರನ್ನು ಥಳಿಸಿ, ಅವಾಚ್ಯ ಪದಗಳಿಂದ ನಿಂದಿಸಿದ್ದಳು. ಈ ವೇಳೆಯಲ್ಲಿಯೂ ಅಧಿಕಾರಿ ತಾಳ್ಮೆ ವಹಿಸಿ ತಮ್ಮ ಕರ್ತವ್ಯವನ್ನು ಪಾಲಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ತಾಳ್ಮೆ ಪ್ರದರ್ಶಿಸಿದ ಸಂಚಾರಿ ಪೇದೆಯ ಕರ್ತವ್ಯ ನಿಷ್ಠೆಗೆ ಮೆಚ್ಚಿದ ಮಹಾರಾಷ್ಟ್ರ ಡೈರೆಕ್ಟರೇಟ್ ಜನರಲ್ ಆಫ್ ಇನ್ಫರ್ಮೇಷನ್ ಮತ್ತು ಪಬ್ಲಿಕ್ ರಿಲೇಶನ್ಸ್ ದಯಾನಂದ್ ಕಾಂಬ್ಳೆ, ಕೊಲಾಬಾ ಎಸಿಪಿ ಲಯಾ ಧೋಂಡೆ ಅವರು ಕಾನ್ ಸ್ಟೇಬಲ್ ಗೆ ಹೂಗುಚ್ಚ ನೀಡಿ ಸಾರ್ವಜನಿಕ ಸ್ಥಳದಲ್ಲಿಯೇ ಗೌರವಿಸಿದ್ದಾರೆ.
Disclaimer:
www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.