ಸುರೇಂದ್ರ ಹತ್ಯೆ ಆರೋಪಿಗೆ ಎನ್ ಕೌಂಟರ್ ಭೀತಿ? | ಸಾಮಾಜಿಕ ಜಾಲತಾಣಗಳಲ್ಲಿ ಪತ್ರ ವೈರಲ್! - Mahanayaka

ಸುರೇಂದ್ರ ಹತ್ಯೆ ಆರೋಪಿಗೆ ಎನ್ ಕೌಂಟರ್ ಭೀತಿ? | ಸಾಮಾಜಿಕ ಜಾಲತಾಣಗಳಲ್ಲಿ ಪತ್ರ ವೈರಲ್!

30/10/2020

ಬಂಟ್ವಾಳ: ರೌಡಿಶೀಟರ್, ಚಿತ್ರನಟ ಸುರೇಂದ್ರ ಹತ್ಯೆ ಆರೋಪಿಗಳು ಎನ್ ಕೌಂಟರ್ ಭೀತಿಯಲ್ಲಿದ್ದಾರೆ ಎನ್ನುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎಂದು ವರದಿಯಾಗಿದೆ.


 ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಜೈಲಿನಲ್ಲಿರುವ ಆಕಾಶಭವನ ಶರಣ್ ಎಂಬಾತನ ವಿಚಾರಣೆಗಾಗಿ ಬಾಡಿ ವಾರೆಂಟ್ ಕೇಳಲಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಕರೆತರುವ ವೇಳೆ ತನ್ನ ಎನ್ ಕೌಂಟರ್ ಮಾಡುವ ಆತಂಕವಿದೆ ಎಂದು ಆತ ಪತ್ರ ಬರೆದಿದ್ದಾನೆ ಎಂದು ವರದಿಗಳಿಂದ ತಿಳಿದು ಬಂದಿದೆ.


 ಈ ಪತ್ರ ನಿಜವೇ ಎನ್ನುವುದು ಇನ್ನೂ ತಿಳಿದು ಬಂದಿಲ್ಲ ಎಂದು ಹೇಳಲಾಗುತ್ತಿದೆ.  ಸುರೇಂದ್ರ ಹತ್ಯೆ ಬೆನ್ನಲ್ಲೇ ಸುರೇಂದ್ರನ ಬಗ್ಗೆ ಹಲವಾರು ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಸುರೇಂದ್ರ ಬಡವರಿಗೆ ಬಡ್ಡಿ ಹಾಕಿ ಹಣ ಮಾಡಿದ ಎಂಬಂತೆಲ್ಲ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈಗ ಪತ್ರವೊಂದು ಹರಿದಾಡುತ್ತಿದೆ ಎಂದು ವರದಿಯಾಗಿದೆ.


ಸುರೇಂದ್ರ ಹತ್ಯೆ ಪ್ರಕರಣವನ್ನು ಸಮರ್ಥಿಸುತ್ತಿರುವವರು ಯಾರು? ಎನ್ನುವ ಪ್ರಶ್ನೆಗಳು ಕೇಳಿ ಬಂದಿದೆ. ಈ ನಡುವೆ ಪೊಲೀಸರ ವಶದಲ್ಲಿರುವ ವ್ಯಕ್ತಿ ಬರೆದ ಪತ್ರ ವೈರಲ್ ಆಗಿದ್ದು ಹೇಗೆ? ಮೊದಲಾದ ಪ್ರಶ್ನೆಗಳು ಕೇಳಿ ಬಂದಿವೆ.


 

 

ಇತ್ತೀಚಿನ ಸುದ್ದಿ