ಇಂದಿನಿಂದ ಪ್ರೊ ಕಬಡ್ಡಿ ಲೀಗ್—11 ಆರಂಭ: ಇಂದು ಯಾವ್ಯಾವ ತಂಡಗಳ ನಡುವೆ ಸೆಣಸಾಟ?
ಹೈದರಾಬಾದ್: 10 ವರ್ಷ ಪೂರೈಸಿರುವ ಪ್ರೊ ಕಬಡ್ಡಿ ಲೀಗ್ ನ 11ನೇ ಆವೃತಿಗೆ ಹೈದರಾಬಾದ್ ನಲ್ಲಿ ಶುಕ್ರವಾರ(ಇಂದು) ಚಾಲನೆ ದೊರೆಯಲಿದೆ.
ಮೆಗಾ ಹರಾಜು ಪ್ರಕ್ರಿಯೆ ಬಳಿಕ ಯುವ ಹಾಗೂ ಅನುಭವಿ ಆಟಗಾರರಿಂದ ತಂಡಗಳನ್ನು ಸಜ್ಜುಗೊಳಿಸಿರುವ 12 ಪ್ರಾಂಚೈಸಿಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಹಾಗೂ ಬೆಂಗಳೂರು ಬುಲ್ಸ್ ತಂಡಗಳು ಸೆಣಸಲಿದ್ದು, ಸ್ಟಾರ್ ರೈಡರ್ ಗಳಾದ ಪವನ್ ಸೆಹ್ರಾವತ್ ಮತ್ತು ಪ್ರದೀಪ್ ನರ್ವಾಲ್ ನಡುವಿನ ಮುಖಾಮುಖಿಯೂ ಕುತೂಹಲ ಕೆರಳಿಸಿದೆ. ಕನ್ನಡಿಗ ಬಿಸಿ ರಮೇಶ್ ಮಾರ್ಗದರ್ಶನದಲ್ಲಿ ಪುಣೇರಿ ಪಲ್ಟಾನ್ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯಲಿದೆ.
12 ತಂಡಗಳು ಡಬಲ್ ರೌಂಡ್ ರಾಬಿನ್ ಮಾದರಿ ಲೀಗ್‌ನಲ್ಲಿ ತಲಾ 22 ಪಂದ್ಯಗಳನ್ನು ಆಡಲಿವೆ. ಅಂಕಪಟ್ಟಿಯ ಅಗ್ರ 6 ತಂಡಗಳು ಪ್ಲೇಆಗೆ ಅರ್ಹತೆ ಪಡೆಯಲಿವೆ. ಸದ್ಯಕ್ಕೆ ಲೀಗ್ ಹಂತದ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದ್ದು, ಟೂರ್ನಿ ಆರಂಭಿಕ ಹಂತದ ಬಳಿಕ ಪ್ಲೇಆ ಪಂದ್ಯಗಳ ವೇಳಾಪಟ್ಟಿ, ಆತಿಥೇಯ ತಾಣವನ್ನು ಹೆಸರಿಸುವ ನಿರೀಕ್ಷೆ ಇದೆ.
ಇಂದು ತೆಲುಗು ಟೈಟಾನ್ಸ್–ಬೆಂಗಳೂರು ಬುಲ್ಸ್ ತಂಡಗಳ ನಡುವೆ ಗುದ್ದಾಟ ನಡೆಯಲಿದೆ. ರಾತ್ರಿ 8 ಗಂಟೆಗೆ ಪಂದ್ಯಾಟ ಆರಂಭವಾಗಲಿದೆ. ದಬಾಂಗ್ ಡೆಲ್ಲಿ– ಯು ಮುಂಬಾ ಪಂದ್ಯಾಟ ರಾತ್ರಿ 9ಕ್ಕೆ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಪಂದ್ಯಾಟ ನೇರ ಪ್ರಸಾರವಾಗಲಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: