ಅವಧಿ ಮೀರಿದ ಚಾಕೊಲೇಟ್ ತಿಂದದ್ದೇ ಯಡವಟ್ಟಾಯಿತು: ರಕ್ತ ವಾಂತಿ ಮಾಡಿದ ಮಗು

ಪಂಜಾಬ್‌ನ ಪಟಿಯಾಲದ ಕಿರಾಣಿ ಅಂಗಡಿಯಿಂದ ಖರೀದಿಸಿದ ಅವಧಿ ಮೀರಿದ ಚಾಕೊಲೇಟ್ ಗಳನ್ನು ತಿಂದ ಒಂದೂವರೆ ವರ್ಷದ ಬಾಲಕಿ ರಕ್ತ ವಾಂತಿ ಮಾಡಿಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಪೊಲೀಸರು ಮತ್ತು ಆರೋಗ್ಯ ಇಲಾಖೆಯ ತನಿಖೆಯ ವೇಳೆ ಚಾಕೊಲೇಟ್ ಗಳ ಅವಧಿ ಮುಗಿದಿತ್ತು ಎಂದು ಮಾಹಿತಿ ಬಯಲಾಗಿದೆ.
ಲುಧಿಯಾನ ಮೂಲದ ಬಾಲಕಿ ತನ್ನ ಹೆತ್ತವರೊಂದಿಗೆ ಪಟಿಯಾಲಕ್ಕೆ ಸಂಬಂಧಿಕರ ಮನೆಗೆ ಹೋಗಿದ್ದಳು. ಸಂಬಂಧಿ ವಿಕ್ಕಿ ಗೆಹ್ಲೋಟ್ ಸ್ಥಳೀಯ ಕಿರಾಣಿ ಅಂಗಡಿಯಿಂದ ಬಾಲಕಿಗೆ ಚಾಕೊಲೇಟ್ ಬಾಕ್ಸ್ ಖರೀದಿಸಿದ್ದರು.
ಮನೆಗೆ ಮರಳಿದ ನಂತರ ಬಾಲಕಿ ಚಾಕೊಲೇಟ್ ತಿಂದ ನಂತರ ಬಾಯಿಯಿಂದ ರಕ್ತಸ್ರಾವ ಆಗಲು ಪ್ರಾರಂಭಿಸಿದೆ. ನಂತರ ಆಕೆಯ ಸ್ಥಿತಿ ಹದಗೆಟ್ಟಿದ್ದರಿಂದ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು. ವಿಷಕಾರಿ ವಸ್ತುವನ್ನು ಸೇವಿಸಿದ ನಂತರ ಬಾಲಕಿ ಅನಾರೋಗ್ಯಕ್ಕೆ ಒಳಗಾಗಿದ್ದಾಳೆ ಎಂದು ವೈದ್ಯಕೀಯ ಪರೀಕ್ಷೆಗಳು ದೃಢಪಡಿಸಿವೆ.
ನಂತರ ಬಾಲಕಿಯ ಕುಟುಂಬವು ಪೊಲೀಸರು ಮತ್ತು ರಾಜ್ಯ ಆರೋಗ್ಯ ಇಲಾಖೆಗೆ ದೂರು ನೀಡಿತು.
ಆರೋಗ್ಯ ಅಧಿಕಾರಿಗಳ ತಂಡವು ದೂರುದಾರರೊಂದಿಗೆ ಕಿರಾಣಿ ಅಂಗಡಿಗೆ ಧಾವಿಸಿ ಮಾದರಿಗಳನ್ನು ಸಂಗ್ರಹಿಸಿತು. ಅಂಗಡಿಯು ಅವಧಿ ಮೀರಿದ ತಿನಿಸುಗಳನ್ನು ಮಾರಾಟ ಮಾಡಿದೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ. ಅಂಗಡಿಯಿಂದ ಇತರ ಅವಧಿ ಮೀರಿದ ತಿಂಡಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth