ಬಂಧನಕ್ಕೂ ಮುನ್ನವೇ ಅರವಿಂದ್ ಕೇಜ್ರಿವಾಲ್ ಇನ್ಸುಲಿನ್ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು: ದೆಹಲಿ ಲೆಫ್ಟಿನೆಂಟ್ ಗವರ್ನರ್ ಗೆ ವರದಿ ಸಲ್ಲಿಕೆ - Mahanayaka

ಬಂಧನಕ್ಕೂ ಮುನ್ನವೇ ಅರವಿಂದ್ ಕೇಜ್ರಿವಾಲ್ ಇನ್ಸುಲಿನ್ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು: ದೆಹಲಿ ಲೆಫ್ಟಿನೆಂಟ್ ಗವರ್ನರ್ ಗೆ ವರದಿ ಸಲ್ಲಿಕೆ

20/04/2024

ಅರವಿಂದ್ ಕೇಜ್ರಿವಾಲ್ ಅವರ ಹತ್ಯೆಗೆ ಪಿತೂರಿ ನಡೆದಿದೆ ಎಂಬ ಆಮ್ ಆದ್ಮಿ ಪಕ್ಷದ ಆರೋಪಗಳ ಮಧ್ಯೆ ತಿಹಾರ್ ಜೈಲು ಆಡಳಿತವು ದೆಹಲಿ ಮುಖ್ಯಮಂತ್ರಿಯ ಆರೋಗ್ಯದ ಬಗ್ಗೆ ತನ್ನ ವರದಿಯನ್ನು ಲೆಫ್ಟಿನೆಂಟ್ ಗವರ್ನರ್ ಗೆ ಶನಿವಾರ ಸಲ್ಲಿಸಿದೆ. ತಿಹಾರ್ ಅಧಿಕಾರಿಗಳು ಆರ್ ಎಂಎಲ್ ಆಸ್ಪತ್ರೆಯ ವೈದ್ಯರನ್ನು ಉಲ್ಲೇಖಿಸಿ ಕೇಜ್ರಿವಾಲ್‌ ರಿಗೆ ಇನ್ಸುಲಿನ್ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ತಿಹಾರ್ ಜೈಲಿನ ಅಧಿಕಾರಿಗಳು ತನ್ನ ವರದಿಯಲ್ಲಿ ಕೇಜ್ರಿವಾಲ್ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗಿಲ್ಲ. ಅವರಿಗೆ ಮೌಖಿಕ ಮಧುಮೇಹ ವಿರೋಧಿ ಔಷಧಿಗಳನ್ನು ಸೂಚಿಸಲಾಗಿದೆ ಎಂದು ಹೇಳಿದೆ.

ಕೇಜ್ರಿವಾಲ್ ಅವರು ಇನ್ಸುಲಿನ್-ರಿವರ್ಸಲ್ ಕಾರ್ಯಕ್ರಮದಲ್ಲಿದ್ದರು. ಬಂಧನಕ್ಕೆ ಮೊದಲೇ ಇನ್ಸುಲಿನ್ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು ಎಂದು ತಿಹಾರ್ ಜೈಲಿನ ವರದಿಯಲ್ಲಿ ತಿಳಿಸಲಾಗಿದೆ. ಎಎಪಿ ಮುಖ್ಯಸ್ಥರು ಮಧುಮೇಹ ವಿರೋಧಿ ಮೌಖಿಕ ಮಾತ್ರೆ ಮೆಟ್ಫಾರ್ಮಿನ್ ಮಾತ್ರ ತೆಗೆದುಕೊಳ್ಳುತ್ತಿದ್ದರು ಎಂದು ಅದು ಹೇಳಿದೆ. ಏಪ್ರಿಲ್ 1 ರಿಂದ ಜೈಲಿನಲ್ಲಿರುವ ಕೇಜ್ರಿವಾಲ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ತಿಹಾರ್ ಜೈಲು ಆಡಳಿತವು ತನ್ನ ವಿವರವಾದ ವರದಿಯನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ಗೆ ಸಲ್ಲಿಸಿದೆ.

 


Provided by

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ