ತೀವ್ರಗೊಂಡ ರೈತರ ಪ್ರತಿಭಟನೆ: 4ನೇ ದಿನಕ್ಕೆ ಕಾಲಿಟ್ಟ ಆಕ್ರೋಶ; 54 ರೈಲುಗಳ ಸಂಚಾರ ರದ್ದು - Mahanayaka

ತೀವ್ರಗೊಂಡ ರೈತರ ಪ್ರತಿಭಟನೆ: 4ನೇ ದಿನಕ್ಕೆ ಕಾಲಿಟ್ಟ ಆಕ್ರೋಶ; 54 ರೈಲುಗಳ ಸಂಚಾರ ರದ್ದು

20/04/2024

ಪಂಜಾಬ್ ನ ಪಟಿಯಾಲ ಜಿಲ್ಲೆಯ ಶಂಭು ರೈಲ್ವೆ ನಿಲ್ದಾಣದಲ್ಲಿ ರೈತರು ಹಳಿಗಳ ಮೇಲೆ ಕುಳಿತಿದ್ದರಿಂದ ಅಂಬಾಲಾ-ಅಮೃತಸರ ಮಾರ್ಗದಲ್ಲಿ ಒಟ್ಟು 54 ರೈಲುಗಳನ್ನು ಶನಿವಾರ ರದ್ದುಪಡಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಭಟನೆಯ ಸಂದರ್ಭದಲ್ಲಿ ಹರಿಯಾಣ ಪೊಲೀಸರು ಬಂಧಿಸಿರುವ ಮೂವರು ರೈತರನ್ನು ಬಿಡುಗಡೆ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.
ಪ್ರತಿಭಟನೆಯು ಕಳೆದ ಮೂರು ದಿನಗಳಲ್ಲಿ 380 ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ. ಪ್ರಯಾಣಿಕರಿಗೆ ಅನಾನುಕೂಲತೆಯನ್ನುಂಟು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಟಿಯಾಲ ಜಿಲ್ಲೆಯ ಶಂಭುವಿನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಬ್ಯಾನರ್ ಅಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.


Provided by

ಬಂಧಿತ ರೈತರ ಬಿಡುಗಡೆಗಾಗಿ ಅವರು ಬುಧವಾರ ಪಂಜಾಬ್-ಹರಿಯಾಣ ಗಡಿಯ ಶಂಭುವಿನ ಅಂಬಾಲಾ-ಲುಧಿಯಾನ-ಅಮೃತಸರ ಮಾರ್ಗದಲ್ಲಿ ಹಳಿಗಳ ಮೇಲೆ ಕುಳಿತು ತಮ್ಮ ಪ್ರತಿಭಟನೆಯನ್ನು ಪ್ರಾರಂಭಿಸಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ