ಗ್ರಾ.ಪಂ. ಚುನಾವಣೆಯಲ್ಲಿ ಪತ್ನಿ ಸೋಲು | ರೈಲಿನಡಿಗೆ ತಲೆಯಿಟ್ಟು ಪತಿ ಆತ್ಮಹತ್ಯೆ! - Mahanayaka

ಗ್ರಾ.ಪಂ. ಚುನಾವಣೆಯಲ್ಲಿ ಪತ್ನಿ ಸೋಲು | ರೈಲಿನಡಿಗೆ ತಲೆಯಿಟ್ಟು ಪತಿ ಆತ್ಮಹತ್ಯೆ!

09/01/2021

ಕಲಬುರಗಿ: ಗ್ರಾಮ ಪಂಚಾಯತ್  ನಲ್ಲಿ ಪತ್ನಿ ಸೋಲು ಹಾಗೂ ಸಾಲ ತೀರಿಸಲು ಸಾಧ್ಯವಾಗದೆ ನೊಂದ ಪತಿ ರೈಲಿನಡಿಗೆ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಇಟಗ ಗ್ರಾಮದಲ್ಲಿ ನಡೆದಿದೆ.

61 ವರ್ಷ ವಯಸ್ಸಿನ ಕರಬಸಪ್ಪ ಪಾಟೀಲ್ ಅವರು ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ.  ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಇವರ ಪತ್ನಿ ಸಂಗಮ್ಮ ಸೋಲು ಅನುಭವಿಸಿದ್ದರು. ಈ ನಡುವೆ ವಿಪರೀತವಾಗಿ ಸಾಲಗಾರರ ಕಾಟವೂ ಆರಂಭವಾಗಿತ್ತು. ಇದರಿಂದ ತೀವ್ರವಾಗಿ ಮನನೊಂದ ಕರಬಸಪ್ಪ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.

ವಾಡಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯ ಹಳಿಗೆ ತಲೆಯಿಟ್ಟು ಕರಬಸಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಕರಬಸಪ್ಪ ಅವರು ಬ್ಯಾಂಕ್ ನಲ್ಲಿ ಮಾತ್ರವಲ್ಲದೇ, ಖಾಸಗಿ ವ್ಯಕ್ತಿಗಳ ಕೈಯಿಂದಲೂ ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ. ಇತ್ತೀಚೆಗೆ ಸಾಲಗಾರರ ವಿಪರೀತ ಕಾಟದಿಂದ ಅವರು ಬೇಸತ್ತಿದ್ದರು ಎಂದು ಹೇಳಲಾಗಿದೆ.


Provided by

ಇತ್ತೀಚಿನ ಸುದ್ದಿ