ರಾಜಸ್ಥಾನ: ಕೇವಲ ಒಂದು ಮತ ಪಡೆದ ಬಿಜೆಪಿ ಅಭ್ಯರ್ಥಿ: ಆ ವೋಟು ತನ್ನದಲ್ಲ ಎಂದ ಸ್ಪರ್ಧಿ! - Mahanayaka

ರಾಜಸ್ಥಾನ: ಕೇವಲ ಒಂದು ಮತ ಪಡೆದ ಬಿಜೆಪಿ ಅಭ್ಯರ್ಥಿ: ಆ ವೋಟು ತನ್ನದಲ್ಲ ಎಂದ ಸ್ಪರ್ಧಿ!

bjp
15/09/2026

ಜೈಪುರ: ರಾಜಸ್ಥಾನದಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶಗಳು ಹಲವು ಅಚ್ಚರಿಗಳಿಗೆ ಸಾಕ್ಷಿಯಾಗಿವೆ. ಇದರ ಮಧ್ಯೆ, ದೀದ್ವಾನಾ-ಕುಚಮನ್ ಜಿಲ್ಲೆಯ ಪರ್ಬತ್ಸರ್‌ ಪುರಸಭೆಯ ವಾರ್ಡ್‌ ನಂ. 13ರಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಕೈಲಾಶ್‌ಚಂದ್‌ (Kailashchand) ಕೇವಲ ಒಂದೇ ಒಂದು ಮತ ಪಡೆದು ತೀವ್ರ ಚರ್ಚೆಗೆ ಗ್ರಾಸವಾಗಿದ್ದಾರೆ.

ಚುನಾವಣಾ ಆಯೋಗದ ವೆಬ್‌ ಸೈಟ್ ಪ್ರಕಾರ, ಈ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೀನಾ ಖಾನಮ್ 376 ಮತಗಳನ್ನು ಪಡೆದು ಭರ್ಜರಿ ಜಯ ಸಾಧಿಸಿದರೆ, ಸ್ವತಂತ್ರ ಅಭ್ಯರ್ಥಿ ರಶೀದ್ ಖಾನ್ 195 ಮತಗಳೊಂದಿಗೆ ಎರಡನೇ ಸ್ಥಾನ ಪಡೆದರು. ಆದರೆ ಬಿಜೆಪಿ ಅಭ್ಯರ್ಥಿ ಕೈಲಾಶ್‌ ಚಂದ್‌ ಅವರಿಗೆ ಬಿದ್ದದ್ದು ಮಾತ್ರ ಕೇವಲ ಒಂದೇ ಒಂದು ಮತ!

ಈ ಕುರಿತು ಪ್ರತಿಕ್ರಿಯಿಸಿರುವ ಕೈಲಾಶ್‌ಚಂದ್‌, “ನನಗೆ ಕೇವಲ ಒಂದು ಮತ ಬಂದಿದೆ. ವಾಸ್ತವವಾಗಿ ನನ್ನ ಮತ ಇರುವುದು ವಾರ್ಡ್‌ 12ರಲ್ಲಿ, ಆದರೆ ಬಿಜೆಪಿ ನನ್ನನ್ನು ಪಕ್ಕದ ವಾರ್ಡ್‌ 13ರಿಂದ ಕಣಕ್ಕಿಳಿಸಿತ್ತು. ಹೇಗಾದರೂ ಮಾಡಿ ಆ ವಾರ್ಡಿನ ಯಾರೋ ಒಬ್ಬರು ನನಗೆ ಮತ ಹಾಕಿದ್ದಾರೆ” ಎಂದು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪರ್ಬತ್ಸರ್‌ ಪುರಸಭೆಯ ಒಟ್ಟು 25 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 13 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆದರೆ, ಬಿಜೆಪಿ 12 ಸ್ಥಾನಗಳನ್ನು ಗಳಿಸಿದೆ. ರಾಜ್ಯದ ಒಟ್ಟು 309 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತಎಣಿಕೆ ನಡೆಯುತ್ತಿದ್ದು, 10,000ಕ್ಕೂ ಹೆಚ್ಚು ಕೌನ್ಸಿಲರ್ ಹುದ್ದೆಗಳಿಗೆ ಸ್ಪರ್ಧೆ ಏರ್ಪಟ್ಟಿತ್ತು. ಇದರ ಜೊತೆಗೆ ರಾಜಸ್ಥಾನದ ಬೇರೆಡೆ ಮತ್ತೊಬ್ಬ ಕಾಂಗ್ರೆಸ್ ಅಭ್ಯರ್ಥಿಯೂ ಕೂಡ ಕೇವಲ 1 ಮತ ಪಡೆದಿರುವ ಘಟನೆಯೂ ವರದಿಯಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Suspected Malware | Cloudflare

Warning

Suspected Malware

This website has been reported for potentially distributing malware.

Malware is malicious software created to intentionally disrupt the normal operations of a device.

Learn More