ರಸ್ತೆ ಬದಿಯ ಕಾಡಿನ ತಂತಿ ಬೇಲಿಗೆ ಸಿಕ್ಕಿ ಒದ್ದಾಡಿದ ಚಿರತೆ…..!
ಶಿರ್ವ: ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡಪಾಡಿ ಪದವು ಬಳಿಯ ಅಶ್ವತ್ಥಕಟ್ಟೆ ಸಮೀಪ ಶಿರ್ವ-ಪಳ್ಳಿ ಮುಖ್ಯರಸ್ತೆಯ ಕಾಡಿನಲ್ಲಿ ತಂತಿ ಬೇಲಿಗೆ ಚಿರತೆ ಸಿಲುಕಿ ಒದ್ದಾಡಿದ ಘಟನೆ ಬುಧವಾರ ನಡೆದಿದೆ.
ಪಡುಬಿದ್ರೆ ಉಪ ವಲಯಾರಣ್ಯಾಧಿಕಾರಿ ಗುರುರಾಜ್ ಕೆ, ಅರಣ್ಯ ರಕ್ಷಕರಾದ ಚರಣ್ರಾಜ್ ಜೋಗಿ, ಮಂಜುನಾಥ್ ನಾಯಕ್, ಕೇಶವ ಪೂಜಾರಿ, ವಾಹನ ಚಾಲಕ ಜೋಯ್ ಸ್ಥಳಕ್ಕೆ ಭೇಟಿ ನೀಡಿದ್ದು, ಬಳಿಕ ಅರವಳಿಕೆ ತಜ್ಞ ವೈದ್ಯರು ಆಗಮನದ ನಂತರ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ.
ಈ ಭಾಗದಲ್ಲಿ ನಿತ್ಯ ನೂರಾರು ವಿದ್ಯಾರ್ಥಿಗಳು, ಪರಿಸರದ ವಿವಿಧ ಶಾಲೆ ಕಾಲೇಜುಗಳಿಗೆ ಹಾಗೂ ಕೆಲಸಕ್ಕೆ ತೆರಳುವ ಮಂದಿಯ ಜೊತೆಗೆ ವಾಹನ ಸವಾರರು ಸಂಚರಿಸುತ್ತಿದ್ದು, ಭಯಭೀತರಾಗಿದ್ದಾರೆ. ಈ ಕಾಡಿನಲ್ಲಿ ಇನ್ನೂ ಅನೇಕ ಚಿರತೆಗಳು ಓಡಾಡುತ್ತಿದ್ದು, ಅರಣ್ಯಾಧಿಕಾರಿಗಳು ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ,
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka