ಕುಡಿತದ ಮತ್ತಿದಲ್ಲಿ ಬೋಟ್ ಚಾಲನೆ | ಸಮುದ್ರದ ದಂಡೆಗೆ ಬಡಿದ ಬೋಟ್ - Mahanayaka

ಕುಡಿತದ ಮತ್ತಿದಲ್ಲಿ ಬೋಟ್ ಚಾಲನೆ | ಸಮುದ್ರದ ದಂಡೆಗೆ ಬಡಿದ ಬೋಟ್

ullala
23/05/2021

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸಮೀಪದ ಕೋಡಿಯಲ್ಲಿ ಮೀನುಗಾರಿಕಾ ಬೋಟ್ ನಿಯಂತ್ರಣ ತಪ್ಪಿ ದಡಕ್ಕೆ ಅಪ್ಪಳಿಸಿದ್ದು, ಅದರಲ್ಲಿದ್ದ 10 ಮಂದಿ ಮೀನುಗಾರರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಶನಿವಾರ ತಡರಾತ್ರಿ 1:30ಕ್ಕೆ ಮಂಗಳೂರು ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ ಬೋಟ್‌ ತೆರಳಿತ್ತು. ಉಳ್ಳಾಲದ ಅಶ್ರಫ್ ಮತ್ತು ಫಾರೂಕ್ ಎಂಬುವರಿಗೆ ಸೇರಿದ ‘ಅಝಾನ್’ ಹೆಸರಿನ ಬೋಟ್ ಇದಾಗಿದೆ.

ಕನ್ಯಾಕುಮಾರಿಯ ಐವರು ಮೀನುಗಾರರು ಸೇರಿದಂತೆ ಒಟ್ಟು 10 ಮಂದಿ ಬೋಟ್‌ನಲ್ಲಿದ್ದರು. ಈ ಪೈಕಿ ಹಲವರು ಕುಡಿತದ ಮತ್ತಿನಲ್ಲಿದ್ದರು. ಚಾಲಕ ಇನ್ನೊಬ್ಬನ ಕೈಯಲ್ಲಿ ಬೋಟ್ ನೀಡಿದ ಪರಿಣಾಮ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ. ಭಾನುವಾರ ನಸುಕಿನ ವೇಳೆಯಲ್ಲಿ ಬೋಟ್‌ ದಡಕ್ಕೆ ಅಪ್ಪಳಿಸಿದಾಗ ಅದರಲ್ಲಿದ್ದ ಮೀನುಗಾರರು ವಾಂತಿ ಮಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ