ಸಿಎಂ ತವರಿನಲ್ಲೇ ದಲಿತ ನಾಯಕರ ರಹಸ್ಯ ಸಭೆ: ಹೊರಗಡೆ ರಾಜೀನಾಮೆ ಅಗತ್ಯವಿಲ್ಲ ಎಂದು ಕುರ್ಚಿಗೆ ಟವಲ್ ಹಾಕಿದ್ರಾ? - Mahanayaka

ಸಿಎಂ ತವರಿನಲ್ಲೇ ದಲಿತ ನಾಯಕರ ರಹಸ್ಯ ಸಭೆ: ಹೊರಗಡೆ ರಾಜೀನಾಮೆ ಅಗತ್ಯವಿಲ್ಲ ಎಂದು ಕುರ್ಚಿಗೆ ಟವಲ್ ಹಾಕಿದ್ರಾ?

dalith cm
09/10/2024

ಮೈಸೂರು: ಹೊರಗಡೆ ಸಿದ್ದರಾಮಯ್ಯ ರಾಜೀನಾಮೆಯ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕರು ಇದೀಗ  ಸಿಎಂ ತವರಿನಲ್ಲೇ ರಹಸ್ಯ ಸಭೆ ನಡೆಸಿ ಕುತೂಹಲ ಸೃಷ್ಟಿಸಿದ್ದಾರೆ.

3-4 ದಿನಗಳ ಹಿಂದೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯನ್ನ ಸತೀಶ್ ಜಾರಕಿಹೊಳಿ ಭೇಟಿಯಾಗಿದ್ರು. ಬಳಿಕ ಮೊನ್ನೆ ಪರಮೇಶ್ವರ್, ಸತೀಶ್ ಜಾರಕಿಹೊಳಿ ಭೇಟಿಯಾಗಿ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ರು. ಈ ಬೆನ್ನಲ್ಲೇ ಈಗ ಮತ್ತೆ ಸಚಿವರು ಭೇಟಿಯಾಗಿದ್ದಾರೆ.

ದಲಿತ ಸಿಎಂ ಚರ್ಚೆ ಇರುವಾಗಲೇ ಸಿದ್ದರಾಮಯ್ಯ ತವರು ಮೈಸೂರಿನಲ್ಲೇ ಕಳೆದ ರಾತ್ರಿ ಸಚಿವರು ರಹಸ್ಯ ಸಭೆ ನಡೆಸಿದ್ದಾರೆ. ಮೂವರು ದಲಿತ ಸಚಿವರು ಮೀಟಿಂಗ್​​ ಮಾಡಿದ್ದಾರೆ. ಮಹದೇವಪ್ಪ, ಜಾರಕಿಹೊಳಿ, ಜಿ.ಪರಮೇಶ್ವರ್, ಮಹದೇವಪ್ಪರ ಮನೆಯಲ್ಲಿ ಸಮಾಗಮವಾಗಿದ್ದಾರೆ. ಈ ವೇಳೆ 10 ಶಾಸಕರು ಕೂಡ ಜೊತೆಗಿದ್ದರು.

ಒಂದೆಡೆ ಮುಡಾ ಪ್ರಕರಣದ ಬೆನ್ನಲ್ಲೇ ಸಿದ್ದರಾಮಯ್ಯ ರಾಜೀನಾಮೆಗೆ ವಿಪಕ್ಷಗಳು ಒತ್ತಾಯಿಸುತ್ತಿವೆ. ಇತ್ತ ಸಿಎಂ ಬೆಂಬಲಿಗರು ಎನ್ನುತ್ತಲೇ ಸಿಎಂ ಕುರ್ಚಿಗೆ ಟವಲ್ ಹಾಕುವ ಕೆಲಸ ನಡೆಯುತ್ತಿದೆಯಾ ಅನ್ನೋ  ಮಾತುಗಳು ಕೇಳಿ ಬಂದಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ