ಮಂಗಳೂರಿನಲ್ಲಿ ಕೊರಗಜ್ಜನಿಗೆ ಚಕ್ಕುಲಿ, ವೀಳ್ಯದೆಲೆ ಸಮರ್ಪಿಸಿದ ಶಿವರಾಜ್ ಕುಮಾರ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ಮಂಗಳೂರಿನ ಕೊರಗಜ್ಜನ ಆದಿಸ್ಥಳ ಕುತ್ತಾರಿಗೆ ಭೇಟಿ ನೀಡಿ ಕೈಮುಗಿದು ಅಜ್ಜನಿಗೆ ಚಕ್ಕುಲಿ, ವೀಳ್ಯದೆಲೆ ಸಮರ್ಪಿಸಿದರು.
ಇವರ ‘ವೇದ’ ಸಿನಿಮಾ ಇದೇ ಬರುವ ಡಿಸೆಂಬರ್ 23ರಂದು ಬಿಡುಗಡೆಗೊಳ್ಳಲಿದೆ. ಈ ಹಿನ್ನೆಲೆ ಚಿತ್ರತಂಡದ ಜೊತೆ ನಟ ಶಿವರಾಜ್‌ಕುಮಾರ್ ಪತ್ನಿ ಸಮೇತ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದರು.
ಪ್ರಾರ್ಥನೆ ಸಲ್ಲಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ‘ಇದೊಂದು ಆಡಂಬರವಿಲ್ಲದ ಪ್ರಾಮಾಣಿಕ ದೈವಿಕ ಸ್ಥಳ. ನಾನು ಕರಾವಳಿಯ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಈ ಕ್ಷೇತ್ರದ ಕಾರ್ನಿಕದ ಬಗ್ಗೆಯೂ ಸ್ನೇಹಿತರೊಬ್ಬರು ಹೇಳಿದ್ದರು. ಇಂದು ‘ವೇದ’ ಸಿನಿಮಾದ ಪ್ರಮೋಶನ್ ಕೂಡಾ ಮಂಗಳೂರಲ್ಲೇ ನಡೆಯುತ್ತಿದೆ. ದೇವರಿಗೆ ಪ್ರಾರ್ಥನೆ ಸಲ್ಲಿಸುವುದರಲ್ಲಿ ಯಾರ ತಪ್ಪು ಇಲ್ಲ. ಆದರೆ ಅದು ಆಗಲೇ ಬೇಕು ಎಂದು ಬೇಡಿಕೆ ಇಡುವುದು ತಪ್ಪು. ಕೊಡುವುದು, ಬಿಡುವುದು ದೇವರಿಗೆ ಗೊತ್ತಿದೆ. ಅಜ್ಜನಿಗೆ ಭಕ್ತಿಯಿಂದ ವೀಳ್ಯದೆಲೆ ಮತ್ತು ಚಕ್ಕುಲಿ ಅರ್ಪಿಸಿದ್ದೇನೆ’ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka