ಬಿಜೆಪಿ ಸರಕಾರಗಳ ಬುಲ್ಡೋಜರ್ ಕಾರ್ಯಾಚರಣೆ: ಸುಪ್ರೀಂಕೋರ್ಟ್ ತೀವ್ರ ವಿರೋಧ
ಬಿಜೆಪಿ ಸರಕಾರಗಳ ಬುಲ್ಡೋಜರ್ ನ್ಯಾಯಕ್ಕೆ ಸುಪ್ರೀಂಕೋರ್ಟ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಆರೋಪಿ ಎಂಬ ಕಾರಣಕ್ಕೆ ಹೇಗೆ ಮನೆ ಕೆಡವುತ್ತೀರಿ? ಅಪರಾಧಿಯಾಗಿದ್ದರೂ ಮನೆ ಕೆಡವಲು ಸಾಧ್ಯ ಇಲ್ಲ ಎಂದು ಸುಪ್ರೀಂ ನ್ಯಾಯಮೂರ್ತಿ ಗವಾಯಿ ಹೇಳಿದ್ದಾರೆ.
ಅಪರಾಧ ಸಾಬೀತಾದರೂ ಬುಲ್ಡೋಜರ್ ಬಳಸಿ ಮನೆ ಕೆಡವುವಂತಿಲ್ಲ ಎಂದು ಕೂಡ ನ್ಯಾಯಮೂರ್ತಿ ಗವಾಯಿ ಹೇಳಿದ್ದಾರೆ.
ವಿವಿಧ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಬುಲ್ಡೋಜರ್ ಕ್ರಮವನ್ನು ಪ್ರಶ್ನಿಸಿ ಜಮೀಯತೆ ಉಲಮಾಯೆ ಹಿಂದ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಮೂರ್ತಿ ಗವಾಯಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಮಯತ್ ಪರ ಹಿರಿಯ ವಕೀಲ ದುಶ್ಯಂತ್ ದವೇ ವಾದಿಸಿದ್ದಾರೆ. ಇದೇ ವೇಳೆ ಬುಲ್ಡೋಜರ್ ನೀತಿಯನ್ನು ಸಮರ್ಥಿಸಿರುವ ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ಅವರು, ಆರೋಪಿ ಕ್ರಿಮಿನಲ್ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣಕ್ಕೆ ಯಾವುದೇ ಸ್ಥಿರ ಆಸ್ತಿಯನ್ನು ನೆಲಸಮ ಮಾಡಲಾಗುತ್ತಿಲ್ಲ.
ಕಟ್ಟಡವು ಕಾನೂನುಬಾಹಿರವಾಗಿದ್ದರೆ ಮಾತ್ರ ನೆಲಸಮ ಮಾಡಲಾಗುತ್ತದೆ ಎಂದು ವಿವರಿಸಿದ್ದಾರೆ. ಮೊದಲು ಅಂಥವರಿಗೆ ನೋಟಿಸ್ ನೀಡಿ. ಉತ್ತರಿಸಲು ಕಾಲಾವಕಾಶ ಕೊಡಿ. ಆಮೇಲೆ ಕಾನೂನು ಪರಿಹಾರಗಳನ್ನು ಕಂಡುಕೊಂಡು ಕೆಡವಲು ಸಮಯ ನೀಡಿ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth