ಸದನದ ಸಂಪ್ರದಾಯ ಮುರಿದು ಸಚಿವರೊಂದಿಗೆ ಕುಳಿತ ತಮಿಳುನಾಡು ಸಿಎಂ ವಿಜಯ್ - Mahanayaka
12:03 PM Thursday 10 - September 2026

ಸದನದ ಸಂಪ್ರದಾಯ ಮುರಿದು ಸಚಿವರೊಂದಿಗೆ ಕುಳಿತ ತಮಿಳುನಾಡು ಸಿಎಂ ವಿಜಯ್

c m joseph vijay
28/08/2026

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ವಿಧಾನಸಭೆಯಲ್ಲಿ ಸಾಂಪ್ರದಾಯಿಕ ನಿಯಮವೊಂದನ್ನು ಮುರಿದು ಎಲ್ಲರ ಗಮನ ಸೆಳೆದಿದ್ದಾರೆ. ಗುರುವಾರ ನಡೆದ ವಿಧಾನಸಭೆಯ ಮಧ್ಯಾಹ್ನದ ಅಧಿವೇಶನದಲ್ಲಿ ಅವರು ತಮ್ಮ ಅಧಿಕೃತ ಕುರ್ಚಿಯನ್ನು ಬಿಟ್ಟು, ಸಚಿವರ ಸಾಲಿನಲ್ಲಿ ಹೋಗಿ ಕುಳಿತುಕೊಳ್ಳುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಸಾಮಾನ್ಯವಾಗಿ ಮುಖ್ಯಮಂತ್ರಿಯವರು ಸಭಾಧ್ಯಕ್ಷರ (Speaker) ಸಮೀಪವಿರುವ ಪ್ರತ್ಯೇಕ ಹಾಗೂ ನಿಗದಿತ ಆಸನದಲ್ಲಿ ಕುಳಿತುಕೊಳ್ಳುವುದು ವಾಡಿಕೆ. ಆದರೆ, ಇದೇ ಮೊದಲ ಬಾರಿಗೆ ಸಿಎಂ ವಿಜಯ್ ತಮ್ಮ ಆಸನವನ್ನು ತೊರೆದು ಮುಂಚೂಣಿಯ ಸಚಿವರ ಸಾಲಿಗೆ ತೆರಳಿದ್ದಾರೆ.

ಅವರು ಮುಂಚೂಣಿಯ ಸಾಲಿನಲ್ಲಿ ಸಚಿವರಾದ ಕೆ.ಎ. ಸೆಂಗೊಟ್ಟಿಯನ್ (ಸದನದ ನಾಯಕ) ಹಾಗೂ ಆಧವ್ ಅರ್ಜುನ್ ಅವರ ನಡುವೆ ಬಂದು ಕುಳಿತರು. ಮುಖ್ಯಮಂತ್ರಿಯೊಬ್ಬರು ಸಚಿವರಿಗೆ ಮೀಸಲಾದ ಸಾಲಿನಲ್ಲಿ ಹೋಗಿ ಕುಳಿತುಕೊಂಡಿರುವುದು ತಮಿಳುನಾಡು ವಿಧಾನಸಭೆಯ ಇತಿಹಾಸದಲ್ಲಿಯೇ ಅಪರೂಪದ ಘಟನೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಶಾಸಕರು ತಮ್ಮ ಸಹೋದ್ಯೋಗಿಗಳೊಂದಿಗೆ ಚರ್ಚಿಸಲು ತಾತ್ಕಾಲಿಕವಾಗಿ ಆಸನ ಬದಲಿಸುವುದು ಸಾಮಾನ್ಯವಾದರೂ, ಮುಖ್ಯಮಂತ್ರಿಯೊಬ್ಬರು ತಮ್ಮ ಅಧಿಕೃತ ಸ್ಥಾನವನ್ನು ತೊರೆದು ಸಚಿವರ ಜೊತೆಯೇ ಕುಳಿತುಕೊಂಡಿದ್ದು ಸದನದಲ್ಲಿ ತೀವ್ರ ಕುತೂಹಲ ಮೂಡಿಸಿತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti