ಹೋಂವರ್ಕ್ ಮಾಡಿಲ್ಲವೆಂದು ಕಪಾಳಮೋಕ್ಷ ಮಾಡಿದ ಶಿಕ್ಷಕಿ: 6 ವರ್ಷದ ವಿದ್ಯಾರ್ಥಿ ಸಾವು! - Mahanayaka
4:05 PM Thursday 10 - September 2026

ಹೋಂವರ್ಕ್ ಮಾಡಿಲ್ಲವೆಂದು ಕಪಾಳಮೋಕ್ಷ ಮಾಡಿದ ಶಿಕ್ಷಕಿ: 6 ವರ್ಷದ ವಿದ್ಯಾರ್ಥಿ ಸಾವು!

vishakha pattanam.jpg
21/08/2026

ಆಂಧ್ರಪ್ರದೇಶದ ವಿಶಾಖಪಟ್ಟಣಂನ ಖಾಸಗಿ ಶಾಲೆಯೊಂದರಲ್ಲಿ ಹೋಂವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿ ಹೊಡೆದ ಪರಿಣಾಮ 6 ವರ್ಷದ ವಿದ್ಯಾರ್ಥಿ ಕುಸಿದು ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.

ಕೋಲು ಹಿಡಿದುಕೊಂಡು ಶಿಕ್ಷಕಿ ಗದರಿಸಿದಾಗ ಬಾಲಕ ಹೆದರಿ, ಕಂಗಾಲಾಗಿದ್ದಾನೆ. ನಂತರ ಕೆಮ್ಮಲು ಪ್ರಾರಂಭಿಸಿ ಶಾಲೆಯಲ್ಲೇ ಕುಸಿದು ಬಿದ್ದಿದ್ದಾನೆ. ಶಿಕ್ಷಕಿ ಹಲ್ಲೆ ನಡೆಸಿದ ನಂತರವೇ ಮಗು ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಮಗುವಿನ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

ಸಿಸಿಟಿವಿ ದೃಶ್ಯದಲ್ಲಿ ಸೆರೆಯಾದ ಕರುಣಾಜನಕ ದೃಶ್ಯ:

ಅಧಿಕಾರಿಗಳು ವಶಪಡಿಸಿಕೊಂಡಿರುವ ಶಾಲೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಶಿಕ್ಷಕಿ ಮಗುವಿಗೆ ಗದರಿಸುವುದು ಮತ್ತು ಪೆಟ್ಟು ಕೊಟ್ಟಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಮಗು ಜೋರಾಗಿ ಅಳುತ್ತಾ, ಶಿಕ್ಷಕಿಯ ಬಳಿ ಬೇಡುವಂತೆ ಕೈಗಳನ್ನು ಆಡಿಸುವುದು ದೃಶ್ಯದಲ್ಲಿದೆ.

ನಂತರ ಶಿಕ್ಷಕಿ ಆತನ ಶರ್ಟ್ ಮತ್ತು ಪ್ಯಾಂಟ್ ಸರಿಪಡಿಸಿ ಕಪಾಳಕ್ಕೆ ಬಾರಿಸುತ್ತಾಳೆ. ಅದಾದ ಕೆಲವೇ ಸೆಕೆಂಡುಗಳಲ್ಲಿ ಮಗು ಆಕೆಯ ಮೇಲೆ ಕುಸಿದು ಬೀಳುತ್ತದೆ. ಶಿಕ್ಷಕಿ ಕುಳಿತಲ್ಲಿಂದಲೇ ಮಗುವನ್ನು ಎತ್ತಲು ಪ್ರಯತ್ನಿಸುತ್ತಾರಾದರೂ, ಮಗುವಿನಿಂದ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ.

ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಶಾಲಾ ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಇತರೆ ಸಾಕ್ಷ್ಯಾಧಾರಗಳನ್ನು ಪರಿಶೀಲಿಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti